janadhvani

Kannada Online News Paper

ಇಳಂತಿಲ ದಾಳಿ ಪ್ರಕರಣ: ಅಪರಾಧಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಠಾಣೆಗೆ ಮನವಿ

ಉಪ್ಪಿನಂಗಡಿ: ಇಳಂತಿಲದಲ್ಲಿ ಐವರ ಮೇಲೆ ನಡೆದ ಮಾರಣಾಂತಿಕ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಇಳಂತಿಲ ಬ್ಲಾಕ್ ಸಮಿತಿ ವತಿಯಿಂದ ಉಪ್ಪಿನಂಗಡಿ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆದರೆ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಮತ್ತು ದಾಳಿಯ ಪ್ರಮುಖ ಆರೋಪಿ ಜಯರಾಂ ಮತ್ತು ಅವನ ಒಂದಿಬ್ಬರು ಸಹಚರರನ್ನು ಬಂಧಿಸಿದ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮತ್ತೆ ಎಸ್‌ಡಿಪಿಐ ನಿಯೋಗವು ಆರಕ್ಷಕ ಅಧಿಕಾರಿಗಳನ್ನು ಭೇಟಿ ಮಾಡಿ, ಸಂಘಪರಿವಾರದಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳಿಂದ ಮತ್ತು ಪೋಲಿಸ್ ಇಲಾಖೆ ಈ ಮೊದಲು ನೀಡಿದ ದೂರುಗಳನ್ನು ನಿರ್ಲಕ್ಷಿಸಿದ್ದೇ ಇಂತಹ ಘಟನೆಗಳು ಪುನರಾವರ್ತನೆಯಾಗಲು ಕಾರಣವಾಗಿದೆ. ಆದ್ದರಿಂದ ಈ ಪೂರ್ವನಿಯೋಜಿತ ದಾಳಿಯ ಹಿಂದಿನ ರೂವಾರಿಗಳೊಂದಿಗೆ ದಾಳಿ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ನಿಯೋಗ ಆಗ್ರಹಿಸಿತು.

ನಿಯೋಗದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಗರ್ ಮತ್ತು ಸದಸ್ಯರು ಹಾಗೂ ಉಪಾಧ್ಯಕ್ಷರು ಹಮೀದ್ ಸಾಲ್ಮರ ಎಸ್ ಡಿ.ಪಿ.ಐ , ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ ಮತ್ತು ಸದಸ್ಯರು ಉಪ್ಪಿನಂಗಡಿ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮುಸ್ತಫ ಲತೀಫಿ,ಮತ್ತು ಸದಸ್ಯರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಇಳಂತಿಲ ಬ್ಲಾಕ್ ಸಮಿತಿ ಅಧ್ಯಕ್ಷರಾದ ಶುಕೂರು ಕುಪ್ಪಟ್ಟಿ. ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ , ಎಸ್‌.ಡಿ.ಪಿ.ಐ ಕಡಬ ಬ್ಲಾಕ್ ಅಧ್ಯಕ್ಷರಾದ ಬಶೀರ್ ಹಲ್ಯಾರ. ಉಪ್ಪಿನಂಗಡಿ ಗ್ರಾಮ ಸಮಿತಿ ಸದಸ್ಯರಾದ ರಶೀದ್ ಮಠ, ಎಸ್.ಡಿ.ಪಿ.ಐ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಅಝೀಝ್ ನಿನ್ನಿಕಲ್ಲ್, ಎಸ್.ಡಿ.ಪಿ.ಐ ನೆಕ್ಕಿಲಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಝಕರಿಯಾ ಕೊಡಿಪ್ಪಾಡಿ ನಿಯೋಗದಲ್ಲಿದ್ದರು.

error: Content is protected !! Not allowed copy content from janadhvani.com