ಅಬುಧಾಬಿ – ಜಿಸಿಸಿ ದೇಶಗಳಲ್ಲಿ ರೆಸಿಡೆಂಟ್ ವೀಸಾ ಹೊಂದಿರುವವರು ಮತ್ತು ಜಿಸಿಸಿ ದೇಶಗಳ ನಾಗರಿಕರು ಯುಎಇಗೆ ಭೇಟಿ ನೀಡಲು ಇ-ವೀಸಾವನ್ನು ಪರಿಚಯಿಸಲಾಗಿದೆ. ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಮತ್ತು ಒಮಾನ್‌ನಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಮತ್ತು ಪ್ರಜೆಗಳಿಗೆ ಇ-ವೀಸಾ ಲಭ್ಯ. ನಾಗರಿಕರು 60 ದಿನಗಳ ವೀಸಾ ಮತ್ತು ವಿದೇಶಿಯರು 30 ದಿನಗಳ ವೀಸಾವನ್ನು ಪಡೆಯಬಹುದು. ಇದನ್ನು ಸಮಾನ ಅವಧಿಗೆ ನವೀಕರಿಸಲು ಅವಕಾಶವಿದೆ.
ದುಬೈ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಫಾರ್ ಫಾರಿನರ್ಸ್ ಅಫೇರ್ಸ್ (ಜಿಡಿಆರ್‌ಎಫ್‌ಎ), ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್, ಕಸ್ಟಮ್ಸ್ ಮತ್ತು ಪೋರ್ಟ್ ಸೆಕ್ಯುರಿಟಿ (ಐಸಿಪಿ) ಮೊದಲಾದವುಗಳ ವೆಬ್‌ಸೈಟ್ ಮತ್ತು ಸ್ಮಾರ್ಟ್ ಅಪ್ಲಿಕೇಶನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಇ-ವೀಸಾಕ್ಕೆ ಅರ್ಜಿ ಸಲ್ಲಿಸಲು ಕನಿಷ್ಟ ಒಂದು ವರ್ಷದ ಅವಧಿಯ GCC ವೀಸಾ ಮತ್ತು ಕನಿಷ್ಠ 6 ತಿಂಗಳ ಅವಧಿಯ ಪಾಸ್‌ಪೋರ್ಟ್ ಹೊಂದಿರಬೇಕು.