ಕುವೈಟ್ ಸಿಟಿ: ವಿದೇಶಿಗಳು ಕಳುಹಿಸುವ ಹಣಕ್ಕೆ ತೆರಿಗೆಯನ್ನು ವಿಧಿಸುವ ನಿರ್ದೇಶನ ವನ್ನು ಕುವೈಟ್ ಸರ್ಕಾರವು ನಿರಾಕರಿಸುವ ಸಾಧ್ಯತೆ ಇದೆ. ಈ ಕಾನೂನಿನ ಅನುಷ್ಠಾನವು ಅಸಂವಿಧಾನಿಕವಾಗಿದೆ ಎಂದು ಶಾಸನ ಮಂಡಳಿಯ ವಾದವಾಗಿದೆ. ಆದರೆ ಕರಡು ಬಿಲ್ಗೆ ಅನುಮತಿ ನೀಡಿದ್ದ ಹಣಕಾಸು ಸಮಿತಿಯು ಸಂವಿಧಾನಿಕವಾಗಿ ಯಾವುದೇ ಅಡಚಣೆಯಿಲ್ಲ ಎಂಬ ತನ್ನ ನಿಲುವಿಗೆ ಬದ್ದವಾಗಿ ನಿಂತಿದೆ.
ಹೊಸ ಶಾಸನವು ಖೋಟಾನೋಟು ಬದಲಾಯಿಸಲು ಮತ್ತು ಭಯೋತ್ಪಾದಕರಿಗೆ ಹಣಕಾಸನ್ನು ತಲುಪಿಸುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯುಕ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಂಗ ಸದಸ್ಯರು ಹೇಳಿದ್ದಾರೆ.
ಜನರನ್ನು ಇಬ್ಬಗೆಗೊಳಿಸುವ ಅಂತಹ ಕಾನೂನುಗಳನ್ನು ಜಾರಿಗೆ ತಂದರೆ ಅದು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಕಾನೂನು ವಿಚಾರಗಳ ಸಮಿತಿಯ ಅಧ್ಯಕ್ಷ ಹುಮೈದಿ ಅಲ್-ಸುಬಾಹಿ ಹೇಳಿದರು. ಇದರ ಕುರಿತು ಯಾವುದೇ ಸ್ಪಷ್ಟ ಗ್ರಹಿಕೆ ಇಲ್ಲ. ಈ ಕಾನೂನು ಜಾರಿಗೆ ಬರುವ ಮೊದಲು ವಿವರವಾದ ಅಧ್ಯಯನವನ್ನು ನಡೆಸಬೇಕು. ಈ ವಿಷಯದಲ್ಲಿ ಸರ್ಕಾರ ತನ್ನದೇ ಆದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ಅಲ್-ಹುಮೈದಿ ಹೇಳಿದರು. ಸಂಸತ್ತಿನ ಎರಡು ಪ್ರದಾನ ಸಮಿತಿಗಳು ಎರಡು ವಾದಗಳನ್ನು ಮಂಡಿಸಿರುವ ಕಾರಣ ಸರ್ಕಾರವು ನಿರ್ಣಯವನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಣ ವ್ಯವಹಾರಿಕ ಸಂಸ್ಥೆಗಳು ಮತ್ತು ಮನಿ ಎಕ್ಸ್ಚೇಂಜ್ ಯೂನಿಯನ್ಗಳು ದೇಶದ ಹೊಸ ಶಾಸನವನ್ನು ವಿರೋಧಿಸಿವೆ.ಹಣವನ್ನು ಕಳುಹಿಸಲು ತಪ್ಪು ಮಾರ್ಗಗಳನ್ನು ಹುಡುಕುವಲ್ಲಿ ವಿದೇಶಿಗಳಿಗೆ ಪ್ರೇರಣೆಯಾಗಲಿದೆ ಎಂಬುದು ಅವರ ವಾದವಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ