ನವದೆಹಲಿ,ಏ.6- ನ್ಯೂಸ್ ಪೋರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾ ಲಯ 10 ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಸದಸ್ಯರು ನ್ಯೂಸ್ ಪೋರ್ಟಲ್ ಹಾಗೂ ಮಾಧ್ಯಮ ವೆಬ್ಸೈಟ್ ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲಿದ್ದಾರೆ. ಏ.4ರಂದು ಬಿಡುಗಡೆ ಮಾಡಿದ ಆದೇಶದ ಪ್ರಕಾರ ಈ ಸಮಿತಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಗೃಹ ಸಚಿವಾಲಯದ ಸದಸ್ಯರು ಇರಲಿದ್ದಾರೆ. ಇದರ ಜೊತೆಗೆ ಕಾನೂನು ಇಲಾಖೆ ಹಾಗೂ ಪ್ರಸಾರ ಇಲಾಖೆ ಕಾರ್ಯದರ್ಶಿಗಳು ಇರಲಿದ್ದಾರೆ.
ಈ ಸಮಿತಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ), ನ್ಯೂಸ್ ಬ್ರಾಡ್ಕಾಸ್ಟ್ ಅಸೋಸಿಯೇಶನ್ ಮತ್ತು ಇಂಡಿಯನ್ ಬ್ರಾಡ್ ಕಾಸ್ಟರ್ಸ್ ಫೆಡರೇಶನ್ ಪ್ರತಿನಿಧಿಗಳನ್ನು ಒಳಗೊಂಡಿದೆ. ಖಾಸಗಿ ಮಾಧ್ಯಮಗಳು ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆ ನಿಯಂತ್ರಣದಲ್ಲಿವೆ. ಮುದ್ರಣ ಮಾಧ್ಯಮಗಳನ್ನು ಪಿಸಿಐ ನಿಯಂತ್ರಿಸುತ್ತದೆ. ಆದರೆ ನ್ಯೂಸ್ ಪೋರ್ಟಲ್ ಹಾಗೂ ಆನ್ಲೈನ್ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳಿರಲಿಲ್ಲ. ಸುಳ್ಳು ಸುದ್ದಿಯ ಮೇಲೆ ನಿಯಂತ್ರಣ ಹೇರುವುದೇ ಮುಖ್ಯ ಉದ್ದೇಶವಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ