janadhvani

Kannada Online News Paper

ಇನ್ಮುಂದೆ ಪಾಸ್ಪೋರ್ಟ್ ಪಡೆಯಲು ಪೋಲೀಸ್ ಪರಿಶೀಲನೆ ಅಗತ್ಯವಿಲ್ಲ

ಬೆಂಗಳೂರು: ಸಾರ್ವಜನಿಕರಿಗೆ ತ್ವರಿತವಾಗಿ ಪಾಸ್‌ಪೋರ್ಟ್‌ ಒದಗಿಸುವ ಉದ್ದೇಶದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಕೈಬಿಡಲು ತೀರ್ಮಾಸಿದೆ.‌

ಪರಿಶೀಲನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವಾಲಯಕ್ಕೆ ದೂರು ನೀಡಿದ್ದ ಹಲವರು, ‘ಪೊಲೀಸರು ತ್ವರಿತವಾಗಿ ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಪಾಸ್‌ಪೋರ್ಟ್‌ ಕೈ ಸೇರು
ವುದು ತಡವಾಗುತ್ತಿದೆ’ ಎಂದಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಚಿವಾಲಯವು, ‘ಔಟ್‌ ಆಫ್‌ ಟರ್ನ್‌’ ಎಂಬ ಯೋಜನೆ ರೂಪಿಸಿದೆ.

‘ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಅವರ‍್ಯಾರೂ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಗತ್ಯವಿರುವುದಿಲ್ಲ. ‘ತತ್ಕಾಲ್‌’ ಅಡಿ ಅರ್ಜಿ ಸಲ್ಲಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ’ ಎಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಅಧಿಕಾರಿ ಭರತ್‌ಕುಮಾರ್ ತಿಳಿಸಿದರು.

‘ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿಗಳು, ಅರ್ಜಿದಾರರ 12 ದಾಖಲೆಗಳ ಪೈಕಿ ಕೆಲವನ್ನು ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕವೇ ಅರ್ಜಿ ವಿಲೇವಾರಿ ಮಾಡಲಿದ್ದಾರೆ. ಅರ್ಜಿದಾರರ ದಾಖಲೆಗಳಲ್ಲಿ ಏನಾದರೂ ಲೋಪ ಕಂಡು ಬಂದರೆ ಮಾತ್ರ ಪೊಲೀಸ್‌ ಪರಿಶೀಲನೆಗೆ ಕಳುಹಿಸಲಿದ್ದಾರೆ’ ಎಂದರು.

‘ಪರಿಶೀಲನೆಗಾಗಿ ಪೊಲೀಸರಿಗೆ ಪ್ರತ್ಯೇಕ ಉಪಕರಣ ನೀಡಿದ್ದೇವೆ. ಅವುಗಳ ಬಳಕೆ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹೀಗಾಗಿಯೇ ಪರಿಶೀಲನೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ’ ಎಂದರು.

ಪಾಸ್‌ಪೋರ್ಟ್‌ಗೆ ಬೇಕಾದ ದಾಖಲೆಗಳು

  • ಚುನಾವಣಾ ಗುರುತಿನ ಚೀಟಿ
  • ಎಸ್ಸಿ/ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರಮಾಣಪತ್ರ
  • ರಾಜ್ಯ, ಕೇಂದ್ರ ಸರ್ಕಾರ ಹಾಗೂ ಖಾಸಗಿ ವಲಯದ ಕಂಪನಿಗಳು ನೀಡುವ ಗುರುತಿನ ಪತ್ರ
  • ಶಸ್ತ್ರಾಸ್ತ್ರ ಪರವಾನಗಿ
  • ಪಿಂಚಣಿ ದಾಖಲೆಗಳು
  • ಪ್ಯಾನ್ ಕಾರ್ಡ್‌
  • ಬ್ಯಾಂಕ್‌, ಕಿಸಾನ್ ಹಾಗೂ ಅಂಚೆ ಕಚೇರಿ ಪಾಸ್‌ಬುಕ್
  • ಶಿಕ್ಷಣ ಸಂಸ್ಥೆಗಳು ನೀಡಿದ ವಿದ್ಯಾರ್ಥಿ ಗುರುತಿನ ಪತ್ರ
  • ಚಾಲನಾ ಪರವಾನಗಿ ಪತ್ರ
  • ಜನನ ಪ್ರಮಾಣಪತ್ರ
  • ಪಡಿತರ ಚೀಟಿ

error: Content is protected !! Not allowed copy content from janadhvani.com