janadhvani

Kannada Online News Paper

ಕೆಸಿಎಫ್ ಒಮಾನ್: ಇಶ್ಕೇ ರಸೂಲ್ ﷺ ಮೀಲಾದ್ ಕಾನ್ಫರೆನ್ಸ್ ಮತ್ತು ಉರ್ದು ಕನ್ವೆನ್ಷನ್‌

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಇಶ್ಕೇ ರಸೂಲ್ ﷺ ರವರ ಜನ್ಮ ದಿನಾಚರಣೆಯ ಅಂಗವಾಗಿ ಮೀಲಾದ್ ಉರ್ದು ಕನ್ವೆನ್ಶನ್ ಮತ್ತು ಮೀಲಾದ್ ಕಾನ್ಫರೆನ್ಸ್ ಆನ್ಲೈನ್ ಝೂಮ್ ಮುಖಾಂತರ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರ ದುಅ ನೆರವೇರಿಸಲಿದ್ದಾರೆ.

ಅಕ್ಟೋಬರ್ 28 ಗುರುವಾರ ರಾತ್ರಿ ನಡೆಯಲಿರುವ ಮೀಲಾದ್ ಉರ್ದು ಕನ್ವೆನ್ಶನ್ ಮುಖ್ಯ ಪ್ರಭಾಷಣ ಗಾರರಾಗಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಯ್ಯಿದ್ ಅಥ಼ರ್ ಸಖಾಫಿ ಹಾವೇರಿ ಹಾಗೂ ಮುಹಮ್ಮದ್ ಮಿಹ್ರಾಜುದ್ದೀನ್ ರಝಾ ಖಾದ್ರಿ ಅಲ್- ಅಸ್ಅದಿ ಶಿವಮೊಗ್ಗ (ಇಹ್ಸಾನ್ ಕರ್ನಾಟಕ ದಾಹಿ, ಎಸ್ ಎಸ್ ಎಫ್ ಶಿವಮೊಗ್ಗ ವಲಯ ಅಧ್ಯಕ್ಷರು ಹಾಗೂ ಅಖಿಲ ಭಾರತ ಉರ್ದು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರು) ಇವರ ನ ಅತೇ ಶರೀಫ್ ನಡೆಸಿ ಕೊಡಲಿದ್ದಾರೆ.

ನವೆಂಬರ್ 4 ರಂದು ಗುರುವಾರ ರಾತ್ರಿ ನಡೆಯಲಿರುವ ಮೀಲಾದ್ ಕಾನ್ಫರೆನ್ಸ್ 2021 ಕಾರ್ಯಕ್ರಮದಲ್ಲಿ ನಿಝಾರ್ ಖತುಬಿ ಮಡವೂರ್ ಇವರ ನೇತೃತ್ವದಲ್ಲಿ ಬುರ್ದಾ ಅಲಾಪಣೆ ನಡೆಯಲಿದೆ. ಶಾಫಿ ಸ ಅದಿ ಸೋಮವಾರಪೇಟೆ ಅಧ್ಯಕ್ಷರು ಎಸ್ ಎಸ್ ಎಫ್ ಕೊಡಗು ಜಿಲ್ಲೆ ಇವರು ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ ಹಾಗೂ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ ಬೊಲ್ಮಾರ್ ,ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ , ಕೋಶಾಧಿಕಾರಿ ಆರಿಫ್ ಕೋಡಿ ಇವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಉಬೈದುಲ್ಲಾ ಸಖಾಫಿ ಮಿತ್ತೂರು ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.