ಶಾರ್ಜ: ಕೆ.ಸಿ.ಎಫ್ ಶಾರ್ಜ ಝೋನ್ ವತಿಯಿಂದ ಸ್ವಸ್ಥ ಜಗತ್ತಿನ ಪ್ರವಾದಿ, ಇಶ್ಕೇ ರಸೂಲ್ ಮೀಲಾದ್ ಕಾನ್ಫರೆನ್ಸ್ ದಿನಾಂಕ 22-10-2021 ರಂದು, ಶಾರ್ಜದ ಅಲ್ ತಹಾವುನ್ ನಲ್ಲಿರುವ ಅರ್ಯಾನಾ ಹೋಟೆಲ್ ಸಭಾಂಗಣದಲ್ಲಿ ಶಾರ್ಜ ಝೋನ್ ಅಧ್ಯಕ್ಷರಾದ ಬಹು ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ಜರುಗಿತು.

ಕೆ.ಸಿ.ಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆ.ಸಿ.ಎಫ್ ಶಾರ್ಜ ಝೋನ್ ಮೀಲಾದ್ ಕಮಿಟಿ ಅಧ್ಯಕ್ಷರಾದ ರಫೀಕ್ ತೆಕ್ಕಾರ್ ರವರು ಕಾರ್ಯಕ್ರಮವನ್ನು ಸ್ವಾಗತಿಸಿದರು. ಕೆ.ಸಿ.ಎಫ್ ಯು.ಎ.ಈ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಮಹಮ್ಮದ್ ಹುಝೇರ್ ಕಿರಾಅತ್ ಪಠಿಸಿದರು. ಕೆ.ಸಿ.ಎಫ್ ಶಾರ್ಜ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಂಡಂಗೇರಿಯವರ ನೇತ್ರತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಮಹಬ್ಬತೇ ರಸೂಲ್ ಬುರ್ದಾ ಸಂಗಮ ಸ:ಅದಿಯ ದುಬೈ ತಂಡದಿಂದ ಮಧರ ಕಂಠದ ಬುರ್ದಾ ಆಲಾಪಣೆಯು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.
ಮುಖ್ಯ ಅತಿಥಿ ಶಾಫಿ ಸ:ಅದಿ ಮತ್ತು ಯೂಸುಫ್ ಸಖಾಫಿ ಬೈತರ್ ರವರಿಗೆ ಶಾರ್ಜ ಝೋನ್ ಪರವಾಗಿ ಶಾಲು ಹೊದಿಸಿ ಸನ್ಮಾಸಿಲಾಯಿತು.
ಸ:ಅದಿಯ ದುಬೈ ಕಮಿಟಿಯ ಅಧ್ಯಕ್ಷರಾದ ಬಹು ಸಯ್ಯದ್ ಅಲಿ ಭಾಫಕಿ ತಂಙ್ಞಲ್ ಪ್ರಾರ್ಥನೆಗೆ ನೇತ್ರತ್ವ ಕೋಟ್ಟು ದುವಾ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಜಿಲ್ಲೆ ಎಸ್.ಎಸ್.ಎಫ್ ಅಧ್ಯಕ್ಷರಾದ ಶಾಫಿ ಸ:ಅದಿ ಸೋಮವಾರಪೇಟೆ ಭಾಷಣ ಮಾಡಿ , ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಲು ಸಾದ್ಯ ಹೋರತು ಹೋರಾಟದಿಂದ ಅಲ್ಲ ಹಾಗೂ ಶಿಕ್ಷಣಕ್ಕೆ ನಾವು ಜೀವನದಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ಎಸ್.ಎಸ್.ಎಫ್ ಇದರ ಕೋಶಾಧಿಕಾರಿ ಬಹು ಸುಫಿಯಾನ್ ಸಖಾಫಿಯವರು ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು. ವೇದಿಕೆಯಲ್ಲಿ ಉಸ್ಮಾನ್ ಹಾಜಿ ನಾಪೋಕ್ಲ್, ಮೂಸ ಹಾಜಿ ಬಶರಾ, ಝ್ಯೇನುದ್ಧೀನ್ ಹಾಜಿ ಬೆಳ್ಲಾರೆ, ಶಾಫಿ ಸಖಾಫಿ ಕೊಂಡಂಗೇರಿ, ಅಬ್ದುಲ್ ಹಕೀಂ ತುರ್ಕಲಿಕೆ, ಇಸ್ಮಾಯಿಲ್ ಮದನಿನಗರ, ಹಸ್ಯೆನಾರ್ ಅಮಾನಿ ಅಜ್ಜಾವರ, ಅಬ್ದುಲ್ಲಾ ಹಾಜಿ ನಲ್ಕ, ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ, ರಜಬ್ ಮಹಮ್ಮದ್ ಉಚ್ಚಿಲ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಮೀಲಾದ್ ಕಮಿಟಿ ಕನ್ವೀನರ್ ಅಸ್ಗರ್ ಅಗ್ರಹಾರರವರು ಧನ್ಯವಾದ ಕೋರಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ