ಅಬುಧಾಬಿ: ಯುಎಇಯಲ್ಲಿ ಐದು ವರ್ಷಗಳವರೆಗಿನ ಬಹು ಪ್ರವೇಶ ಸಂದರ್ಶಕ ವೀಸಾಗಳಿಗೆ ಇದೀಗ ಅರ್ಜಿ ಸಲ್ಲಿಸಬಹುದಾಗಿದೆ. ಐಡೆಂಟಿಟಿ ಮತ್ತು ಸಿಟಿಜನ್ಶಿಪ್ ಫೆಡರಲ್ ಪ್ರಾಧಿಕಾರವು ಎಲ್ಲಾ ರಾಷ್ಟ್ರೀಯತೆಗಳಿಗೆ ಅಂತಹ ವೀಸಾಗಳನ್ನು ನೀಡಲಾಗುವುದು ಎಂದು ಘೋಷಿಸಿದೆ.
ಹೊಸ ದೀರ್ಘಾವಧಿ ಭೇಟಿ ವೀಸಾಗಳು ಒಂದಕ್ಕಿಂತ ಹೆಚ್ಚು ಬಾರಿ ದೇಶವನ್ನು ಪ್ರವೇಶಿಸಲು ಮತ್ತು ನಿಮ್ಮ ಸ್ವಂತ ಪ್ರಾಯೋಜಕತ್ವದಲ್ಲಿ ಉಳಿಯಲು ಅವಕಾಶ ನೀಡುತ್ತದೆ. ಪ್ರತಿ ಭೇಟಿಯಲ್ಲಿ 90 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು. ಅಗತ್ಯವಿದ್ದರೆ, ಅದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು. ವೀಸಾ ಶುಲ್ಕ 560 ದಿರ್ಹಮ್.
ICA ವೆಬ್‌ಸೈಟ್‌ನಿಂದ ನೇರವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬಹುದು. ದುಬೈನ ಡೈರೆಕ್ಟರೇಟ್ ಜನರಲ್ ಆಫ್ ರೆಸಿಡೆನ್ಸ್ ಮತ್ತು ಫಾರಿನರ್ಸ್ ಅಫೇರ್ಸ್ ನಿಂದ ಇದಕ್ಕೆ ಅನುಮೋದನೆ ಲಭಿಸಬೇಕು.
ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಹೆಸರು ಮತ್ತು ನಿಮ್ಮ ಸ್ವದೇಶದ ವಿಳಾಸವನ್ನು ನಮೂದಿಸಬೇಕು.ನಂತರ ಕಲರ್ ಫೋಟೋ, ಪಾಸ್‌ಪೋರ್ಟ್ ಪ್ರತಿ, ವೈದ್ಯಕೀಯ ವಿಮೆ ಮತ್ತು ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಅಪ್‌ಲೋಡ್ ಮಾಡಬೇಕು. ಕಳೆದ ಆರು ತಿಂಗಳಲ್ಲಿ $ 4,000 ಡಾಲರ್ ಅಥವಾ ತತ್ಸಮಾನ ವಿದೇಶಿ ಕರೆನ್ಸಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಅರ್ಜಿಯನ್ನು ಮರು ಪರಿಶೀಲಿಸಿದ ನಂತರ ಅರ್ಜಿ ಶುಲ್ಕವನ್ನು ಪಾವತಿಸಬಹುದು. ಇ-ಮೇಲ್ ಮೂಲಕ ವೀಸಾ ಲಭ್ಯವಾಗುವುದು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?