janadhvani

Kannada Online News Paper

ಯುಎಇ: ಐದು ವರ್ಷಗಳ ಸಂದರ್ಶಕ ವೀಸಾ- ಶುಲ್ಕ ಕೇವಲ 560 ದಿರ್ಹಮ್

ಅಬುಧಾಬಿ: ಯುಎಇಯಲ್ಲಿ ಐದು ವರ್ಷಗಳವರೆಗಿನ ಬಹು ಪ್ರವೇಶ ಸಂದರ್ಶಕ ವೀಸಾಗಳಿಗೆ ಇದೀಗ ಅರ್ಜಿ ಸಲ್ಲಿಸಬಹುದಾಗಿದೆ. ಐಡೆಂಟಿಟಿ ಮತ್ತು ಸಿಟಿಜನ್ಶಿಪ್ ಫೆಡರಲ್ ಪ್ರಾಧಿಕಾರವು ಎಲ್ಲಾ ರಾಷ್ಟ್ರೀಯತೆಗಳಿಗೆ ಅಂತಹ ವೀಸಾಗಳನ್ನು ನೀಡಲಾಗುವುದು ಎಂದು ಘೋಷಿಸಿದೆ.

ಹೊಸ ದೀರ್ಘಾವಧಿ ಭೇಟಿ ವೀಸಾಗಳು ಒಂದಕ್ಕಿಂತ ಹೆಚ್ಚು ಬಾರಿ ದೇಶವನ್ನು ಪ್ರವೇಶಿಸಲು ಮತ್ತು ನಿಮ್ಮ ಸ್ವಂತ ಪ್ರಾಯೋಜಕತ್ವದಲ್ಲಿ ಉಳಿಯಲು ಅವಕಾಶ ನೀಡುತ್ತದೆ. ಪ್ರತಿ ಭೇಟಿಯಲ್ಲಿ 90 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು. ಅಗತ್ಯವಿದ್ದರೆ, ಅದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು. ವೀಸಾ ಶುಲ್ಕ 560 ದಿರ್ಹಮ್.

ICA ವೆಬ್‌ಸೈಟ್‌ನಿಂದ ನೇರವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬಹುದು. ದುಬೈನ ಡೈರೆಕ್ಟರೇಟ್ ಜನರಲ್ ಆಫ್ ರೆಸಿಡೆನ್ಸ್ ಮತ್ತು ಫಾರಿನರ್ಸ್ ಅಫೇರ್ಸ್ ನಿಂದ ಇದಕ್ಕೆ ಅನುಮೋದನೆ ಲಭಿಸಬೇಕು.

ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಹೆಸರು ಮತ್ತು ನಿಮ್ಮ ಸ್ವದೇಶದ ವಿಳಾಸವನ್ನು ನಮೂದಿಸಬೇಕು.ನಂತರ ಕಲರ್ ಫೋಟೋ, ಪಾಸ್‌ಪೋರ್ಟ್ ಪ್ರತಿ, ವೈದ್ಯಕೀಯ ವಿಮೆ ಮತ್ತು ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಅಪ್‌ಲೋಡ್ ಮಾಡಬೇಕು. ಕಳೆದ ಆರು ತಿಂಗಳಲ್ಲಿ $ 4,000 ಡಾಲರ್ ಅಥವಾ ತತ್ಸಮಾನ ವಿದೇಶಿ ಕರೆನ್ಸಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಅರ್ಜಿಯನ್ನು ಮರು ಪರಿಶೀಲಿಸಿದ ನಂತರ ಅರ್ಜಿ ಶುಲ್ಕವನ್ನು ಪಾವತಿಸಬಹುದು. ಇ-ಮೇಲ್ ಮೂಲಕ ವೀಸಾ ಲಭ್ಯವಾಗುವುದು.

error: Content is protected !! Not allowed copy content from janadhvani.com