janadhvani

Kannada Online News Paper

ಕುಂಬ್ರ ಮರ್ಕಝ್‌ನಲ್ಲಿ ಬಹರೈನ್ ನಾಯಕರಿಗೆ ಸನ್ಮಾನ

ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಹರೈನ್ ರಾಷ್ಟ್ರೀಯ ಸಮಿತಿಯ ನಾಯಕರಿಗೆ ಸಂಸ್ಥೆಯ ಸಭಾಂಗಣದಲ್ಲಿ ವಿಜೃಂಭಣೆಯ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.

ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಸಹಕಾರ್ಯದರ್ಶಿ ಮನ್ಸೂರ್ ಸಲ್ಮಾಬಾದ್ ಬೆಳ್ಮ,ಆರ್ಗನೈಝರ್ ಸಿದ್ದೀಖ್ ಮುಸ್ಲಿಯಾರ್ ಕಲ್ಕಟ್ಟ ಅವರನ್ನು ಮೆಮೆಂಟೋ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಹರೈನ್ ಸಮಿತಿಯ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಥೆಯ ಆಡಳಿತ ಸೌಧದ ಕಾಮಗಾರಿಯನ್ನು ವೀಕ್ಷಿಸಿ ನಾಯಕರು ಸಂತೃಪ್ತಿ‌ ಸೂಚಿಸಿದರು .

ಅಭಿನಂದನಾ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಮದನಿ‌ ಹಾದಿ ತಂಙಳ್ ಅಧ್ಯಕ್ಷತೆ ವಹಿಸಿದರು.
ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಸಂಸ್ಥೆಯ ಪರಿಚಯ ಮಾಡಿದರು. ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ, ಜುಬೈಲ್ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ
ಉಪಾಧ್ಯಕ್ಷ ಹಾಜಿ ಕೆ.ಎಸ್.ಅಬೂಬಕರ್ ಸ‌ಅದಿ ಮಜೂರು,ಕೋಶಾಧಿಕಾರಿ ಹಾಜಿ ಅಬ್ದುಲ್‌ ಕರೀಂ ಚೆನ್ನಾರ್, ನಾಯಕರಾದ ಹಾಜಿ‌ ಮುಹಮ್ಮದ್ ಕುಕ್ಕುವಳ್ಳಿ, ಆಡಿಟರ್ ಹಾಜಿ ಜಿ.ಎಂ.ಅನ್‌ವರ್ ಹುಸೈನ್ ಗೂಡಿನಬಳಿ, ಶರೀಅತ್ ಕಾಲೇಜ್ ಜೋಯಿಂಟ್ ಡೈರೆಕ್ಟರ್ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು,ಸದಸ್ಯ ಇಖ್ಬಾಲ್ ಬಪ್ಪಳಿಗೆ ಮುಂತಾದವರು ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮರ್ಕಝ್ ಬಹರೈನ್ ಸಮಿತಿ ಪ್ರಧಾನ ಕಾರ್ಯದರ್ಶಿ ಖಲಂದರ್ ಶರೀಫ್ ಕಕ್ಕೆಪದವು ಅವರ ಷಡ್ಡಕ, ಇತ್ತೀಚೆಗೆ ಬಹರೈನ್ ನಲ್ಲಿ ನಿಧನರಾದ ಅಬ್ದುಲ್ ರಹ್ಮಾನ್ ನಂದಾವರ ಅವರ ಹೆಸರಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಆಡಳಿತಾಧಿಕಾರಿ ಬಿಕೆ ರಶೀದ್ ಸಂಪ್ಯ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.