ಬೆಂಗಳೂರು: ಬಾಡಿಗೆದಾರಿಕೆ ಕುರಿತಂತೆ ರಾಜ್ಯ ಸರ್ಕಾರ ಹೊಸಾ ಅಧಿನಿಯಮ ತರಲು ಮುಂದಾಗಿದೆ.ಈ ಹೊಸ ಅಧಿನಿಯಮದಲ್ಲಿ ಏನೇನಿದೆ, ಏನೇನಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.
- ಬಾಡಿಗೆದಾರರು ಹಾಗೂ ಮಾಲೀಕರು ಯಾವುದೇ ಒಪ್ಪಂದ ಮಾಡಿಕೊಂಡರೂ,ಈ ಅದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ. ಅವರಿಬ್ಬರ ಅಗ್ರಿಮೆಂಟೇ ಫೈನಲ್, ಇನ್ನು ಮೇಲೆ ಏನೇ ಆದರೂ ಇಬ್ಬರೆ ಕುಳಿತು ಬಗೆಹರಿಸಿಕೊಳ್ಳಬೇಕಾಗಬಹುದು.
- ಬಾಡಿಗೆದಾರ ಹಾಗೂ ಮಾಲೀಕರ ಕೇಸ್ ನ್ಯಾಯಾಯುತವಾಗಿ ಪರಿಹರಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಸರ್ಕಾರ ಯೋಚಿಸುತ್ತಿದೆ.
- ಬಾಡಿಗೆ ಹೆಚ್ಚಳದ ಮೇಲೆ ನಿಯಂತ್ರಣ ತರಲು ಸರ್ಕಾರ ಮುಂದಾಗಿದೆ. ಏಕೆಂದರೆ ಕೆಲವು ಕಡೆ ಮೂಗಿಗಿಂತ ಮೂಗುತಿ ಬಾರ ಅನ್ನುವ ರೀತಿ ಇದೆ. ಅಲ್ಲದೆ ಅವೈಜ್ಞಾನಿಕ ಬಾಡಿಗೆ ಅದರಿಂದ ಉಂಟಾಗುತ್ತಿರುವ ತಲೆನೋವುಗಳಿಂದ ಮುಕ್ತಿ ಕೊಡಲು ಸರ್ಕಾರ ನಿರ್ಧರಿಸಿದೆ.
- ಅನೌಪಚಾರಿಕ ಬಾಡಿಗೆ ಮಾರುಕಟ್ಟೆಯನ್ನು ಸೃಜಿಸು ಯೋಚನೆಯೂ ಸರ್ಕಾರದ ಮುಂದಿದೆ. ಹಾಗೂ ಬಾಡಿಗೆ ಕರಾರು & ದಸ್ತಾವೇಜುಗಳನ್ನು ಸಲ್ಲಿಸಲು ವೇದಿಕೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
- ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಗರಿಷ್ಟಮಿತಿ ಇರುವುದಿಲ್ಲ, ಒಪ್ಪಂದದ ಮೇರೆಗೆ ಬಾಡಿಗೆ ನಿರ್ಧಾರ ಮಾಡಬಹುದು.ಗರಿಷ್ಠ ತಿಂಗಳ ಬಾಡಿಗೆಗೆ ಸಮನಾದ ಭದ್ರತಾ ಠೇವಣಿ ಅಂದರೆ ಅಡ್ವಾನ್ಸ್ ಅನ್ನು ಮಾತ್ರ ಪಡೆಯಬೇಕು. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಸಾಧ್ಯತೆ ಇದೆ.
- ಬಾಡಿಗೆ ನ್ಯಾಯಾಧಿಕರಣದ ಸ್ಥಾಪನೆ, ಕೇಸ್ ವಿಚಾರಣೆಗೆ ಜಿಲ್ಲಾ ನ್ಯಾಯಾಧೀಶರ ನೇಮಕ ಮಾಡಲಾಗುವುದು.
- ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ 60 ದಿನಗಳ ಒಳಗೆ ಕೇಸ್ ಇತ್ಯರ್ಥ ಮಾಡಬೇಕು, ಯಾವುದೇ ಕಾರಣಕ್ಕೂ ಇದನ್ನು ವಿಳಂಬ ಮಾಡುವಂತಿಲ್ಲ.
- ಬಾಡಿಗೆ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ, ಮಧ್ಯಕಾಲೀನ ಆದೇಶವನ್ನು ಹೊರಡಿಸುವುದಕ್ಕೆ ಅವಕಾಶವಿದೆ. 3ಕ್ಕಿಂತ ಹೆಚ್ಚು ಮುಂದೂಡಿಕೆಗಳಿಗೆ ಅವಕಾಶ ನೀಡುವಂತಿಲ್ಲ.
- ಸರ್ವರಿಗೂ ವಸತಿ ಕಾರ್ಯಕ್ರಮ ಪುನರ್ ಜಾರಿಗೆ ಚಿಂತನೆ, ಬಾಡಿಗೆದಾರರು & ಭೂ ಮಾಲೀಕರಿಗೆ ಇದರಿಂದ ಲಾಭ ಹೆಚ್ಚಾಗುವ ನಿರೀಕ್ಷೆ.
- ಸ್ಪಂದನಶೀಲ, ಸುಸ್ಥಿರ, ಔಪಚಾರಿಕ ಬಾಡಿಗೆ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ. ಈ ಕುರಿತು ಕಾನೂನು ಚೌಕಟ್ಟಿನಲ್ಲಿ ಕೂಲಂಕುಶವಾಗಿ ಪರಿಶೀಲನೆ ಮಾಡಲಾಗುವುದಾಗಿ ತಿಳಿಸಲಾಗಿದೆ.
- ಬಾಡಿಗೆ ವಲಯದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ, ಸಮಗ್ರ ಆರ್ಥಿಕ ವ್ಯವಸ್ಥೆ ಉತ್ತೇಜಿಸುವುದು.
- ಅನೀರಿಕ್ಷಿತ ವಿಪತ್ತು ಎದುರಾದಾಗ ಇಬ್ಬರ ಒಪ್ಪಂದಗಳ ಆಧಾರದಲ್ಲಿಯೇ ಮುಂದುವರೆಯುವುದಕ್ಕೆ ಅನುಮತಿಸಿವುದು.
- ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಗತ್ಯ ಹಾಗೂ ಬಾಡಿಗೆದಾರ – ಮಾಲೀಕನ ಹಿತಾಸಕ್ತಿಗಳನ್ನು ಸಮತೋಲನ ಮಾಡುವುದು.
- ಹೊಸ ಬಾಡಿಗೆದಾರಿಕೆಗಳಿಗೆ ಲಿಖಿತ ಒಪ್ಪಂದ ಕಡ್ಡಾಯ, ಭೂ ಮಾಲೀಕ, ಅವಶ್ಯಕ ಪೂರೈಕೆಗಳನ್ನ ತಡೆಹಿಡಿಯುವಂತಿಲ್ಲ,.
- ಬಾಡಿಗೆ ಅವಧಿಯು ಚಾಲ್ತಿಯಲ್ಲಿರುವಾಗ ಬಾಡಿಗೆದಾರರನನ್ನು ಹೊರಹಾಕುವಂತಿಲ್ಲ.
- ಬಾಡಿಗೆ ಅವಧಿ ಮುಕ್ತಾಯ ನಂತರ, ಖಾಲಿ ಮಾಡದಿರುವ ಸಂಧರ್ಭದಲ್ಲಿ ಹೆಚ್ಚಿಸಲಾದ ಬಾಡಿಗೆ ಹಣವನ್ನು ಬಾಡಿಗೆದಾರ ಕೊಡಬೇಕು.
- ಮೊದಲ ಎರಡು ತಿಂಗಳಿಗೆ 3 ಪಟ್ಟು, ಅನಂತರ ನಾಲ್ಕು ಪಟ್ಟು ಬಾಡಿಗೆ ನೀಡಬೇಕಾಗುತ್ತದೆ.
- ವಿವಾದ ಇತ್ಯರ್ಥದಲ್ಲಿರುವಾಗ ಬಾಡಿಗೆದಾರ ಬಾಡಿಗೆ ಕಟ್ಟಬೇಕಾಗುತ್ತದೆ. ಮಾಲೀಕನ ಒಪ್ಪಿಗೆ ಇಲ್ಲದೇ, ಬಾಡಿಗೆದಾರ ಯಾವುದೇ ಬದಲಾವಣೆ ಮಾಡುವಂತಿಲ್ಲ.
- ಈ ಎಲ್ಲಾ ಸಂಗತಿಗಳ ನಿರ್ವಹಣೆಗೆ ಡೆಪ್ಯೂಟಿ ಕಲೆಕ್ಟರ್ ನ ದರ್ಜೆಯ ಒಬ್ಬ ಅಧಿಕಾರಿ ನೇಮಕ ಹಾಗೂ ದಸ್ತಾವೇಜುಗಳ ಸಲ್ಲಿಕೆ ಸಬಲ ಹಾಗೂ ಸುಲಭಗೊಳಿಸಲು ಡಿಜಿಟಲ್ ವೇದಿಕೆ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ