janadhvani

Kannada Online News Paper

ಮೇ.30: ಎಸ್ಸೆಸ್ಸೆಫ್ ನಿಂದ ಬತೂಲ್ ಕಾನ್ಫರೆನ್ಸ್

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ವತಿಯಿಂದ “ಬೆರಳು ಕಚ್ಚುವ ಮುನ್ನ” ಎಂಬ ಧ್ಯೇಯ ಘೋಷಣೆಯೊಂದಿಗೆ ಕೌಟುಂಬಿಕ ಜಾಗೃತಿಗಾಗಿ “ಬತೂಲ್ ಕಾನ್ಫರೆನ್ಸ್” ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ರವರ ಅಧ್ಯಕ್ಷತೆಯಲ್ಲಿ ಮೇ 30 ಆದಿತ್ಯವಾರ ರಾತ್ರಿ 7:30 ಗಂಟೆಗೆ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಮುನ್ನಡೆಸುವ ಮದನೀಯಂ ಲೈವ್ ಕಾರ್ಯಕ್ರಮದಲ್ಲಿ ನಡೆಯಲಿರುವುದು ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ