janadhvani

Kannada Online News Paper

ಶ್ಲಾಘನೀಯ ಸೇವೆಗೈಯ್ಯುತ್ತಿರುವ ‘ಸಹಾಯ್’ ಯೊಂದಿಗೆ ಕೈಜೋಡಿಸಿ- ಎ.ಪಿ.ಉಸ್ತಾದ್

‘ಒಳಿತಿನ ವಿಷಯದಲ್ಲಿ ನೀವು ಪರಸ್ಪರ ಸಹಾಯ ಮಾಡಿರಿ’ ಎಂದು ಪವಿತ್ರ ಖುರ್‌ಆನ್ ಹೇಳಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ನಡೆಯುತ್ತಿರುವ ‘ಸಹಾಯ್’ ತಂಡದ ಸೇವೆ ಶ್ಲಾಘನೀಯ. ಹೆಸರೇ ಸೂಚಿಸುವಂತೆ ಜಾತಿ,ಧರ್ಮ,ಫಥ,ಪಂಗಡದ ಬೇಧವಿಲ್ಲದೆ ‘ಸಹಾಯ್’ ಯ ಸಹಾಯಹಸ್ತ ಎಲ್ಲರಿಗೂ ಲಭಿಸುವಂತಾಗಬೇಕು. ಅದಕ್ಕಾಗಿ ಕರ್ನಾಟಕದ ಮಹಾ ಜನತೆ ‘ಸಹಾಯ್’ ಅನ್ನು ಎದೆಗಪ್ಪಿ ಸ್ವೀಕರಿಸಿಬೇಕು” ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಹೇಳಿದ್ದಾರೆ.

ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿಯು ಝೂಮ್ ನಲ್ಲಿ ಆಯೋಜಿಸಿದ ‘ಸಹಾಯ್ ಎಲೈಟ್ ಅಲಯನ್ಸ್’ ಘೋಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಸಹಾಯ್ ಕಾರ್ಯಾಚರಣೆ ಕೇರಳದಲ್ಲಿ ಸಕ್ರಿಯವಾಗಿರುವಂತೆ ಕರ್ನಾಟಕದಲ್ಲೂ ಸಕ್ರಿಯಗೊಳಿಸಬೇಕು.

ಕೋವಿಡ್ ಎಂಬ ಮಹಾಮಾರಿ ಅಟ್ಟಹಾಸದಿಂದ ಮೆರೆಯುತ್ತಿರುವಾಗ ಜೀವಭಯವನ್ನು ಲೆಕ್ಕಿಸದೆ ರೋಗಿಗಳ ಶುಶ್ರೂಷೆ ಮಾಡುವ ಸಹಾಯ್ ಕಾರ್ಯಕರ್ತರ ಸೇವೆ ಎತ್ತಿ ಹೇಳಬೇಕಾದದ್ದೇ. ಸಂಘಕುಟುಂಬದವರೆಲ್ಲರೂ ‘ಸಹಾಯ್’ ಜತೆ ಕೈಜೋಡಿಸಬೇಕು. ಆ ಮೂಲಕ ಸಂಘಟನೆಯ ಸಂದೇಶವನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪುವಂತಾಗಬೇಕು” ಎಂದರು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ ಅನ್ವರ್ ಅಲಿ ರಾಮನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮಹ್ಮೂದ್ ಮುಸ್ಲಿಯಾರ್ ಎಡಪಾಲ್ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸ‌ಅದಿ ಬೆಂಗಳೂರು ದಿಕ್ಸೂಚಿ ಮಾತುಗಳನ್ನಾಡುತ್ತಾ ಸಹಾಯ್ ಸೇವಾ ಸನ್ನದ್ಧ ತಂಡದ ವಿವಿಧ ಕಾರ್ಯಾಚರಣೆಗೆ ಬೆಳಕು ಚೆಲ್ಲಿದರು.

ರಾಜ್ಯ ಸಭಾ ಸದಸ್ಯರಾದ ಡಾ.ಸಯ್ಯದ್ ನಾಸಿರ್ ಹುಸೈನ್ ಮಾತನಾಡಿ ‘ಕೋವಿಡ್-19 ನ ಒಂದನೇ ಅಲೆಯ ಸಂದರ್ಭದಲ್ಲಿ ಮುಸ್ಲಿಮರು ಸಾಕಷ್ಟು ಪ್ರಮಾಣದಲ್ಲಿ ಸಮಾಜ ಸೇವೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಕೆಲವರ ಆಕ್ಷೇಪ-ಆರೋಪಗಳನ್ನು ನೋಡದೆ ಸೇವೆ ಮುಂದುವರಿಯಬೇಕು. ಸಮಾಜದ ಸರ್ವ ಜನರಿಗೂ ಉಪಕಾರ ಮಾಡಬೇಕು. ಸಹಾಯ್ ನಿಂದಲೂ ಹೆಚ್ಚಿನ ರೀತಿಯಲ್ಲಿ ಇದು ಸಾಧ್ಯವಾಗಲಿ” ಎಂದರು.

ನಿವೃತ್ತ ಪೋಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿ “ಸಹಾಯ್ ಸೇವೆಯನ್ನು ನಾನು ವೀಕ್ಷಿಸುತ್ತಾ ಬರುತ್ತಿದ್ದೇನೆ. ರಾತ್ರಿ ಹಗಲೆನ್ನದೆ ಸಮಾಜ ಸೇವೆ ಮಾಡುತ್ತಿರುವ ಸಹಾಯ್ ತಂಡವು ಮುಸ್ಲಿಂ ಸಮುದಾಯಕ್ಕೇ ಅಭಿಮಾನ” ಎಂದರು.

ಮಾಜಿ ಆರೋಗ್ಯ ಸಚಿವರಾದ ಯು‌ಟಿ.ಖಾದರ್ ಮಾತನಾಡಿ “ಸಮಾಜ ಸೇವೆಯು ಅಲ್ಲಾಹನು ಮೆಚ್ಚಿದ ಕೆಲಸ. ಹೆಚ್ಚೆಚ್ಚು ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಎ.ಪಿ.ಉಸ್ತಾದರ ನಿರ್ದೇಶನದಲ್ಲಿ ನಡೆಯುತ್ತಿರುವ ಸಹಾಯ್ ತಂಡದ ಸೇವೆ ಎಲ್ಲರಿಗೂ ಮಾದರಿಯಾಗಲಿ” ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷರಾದ ಮೌಲಾನಾ ಶಬೀರ್ ರಝ್ವಿ ಬೆಂಗಳೂರು, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಮೌಲಾನಾ ನಾಸಿರ್ ಹುಸೈನ್ ರಝ್ವಿ ಹಾಸನ, ಕೆಸಿಎಫ್ INC ಅಧ್ಯಕ್ಷರಾದ ಡಾ.ಶೇಖ್ ಬಾವ ಅಬೂದಾಬಿ, ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಬ್ಯಾರಿ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ರಹೀಂ ಉಚ್ಚಿಲ, ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ ಶುಭ ಹಾರೈಸಿದರು.

ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ‘ಸಹಾಯ್ ಎಲೈಟ್ ಅಲಯನ್ಸ್’ ತಂಡವನ್ನು ಪೋಷಿಸಿದರು.

ಚೇರ್ಮೇನ್- ಡಾ.ಯು.ಟಿ. ಇಫ್ತಿಕಾರ್,
ಜನರಲ್ ಕನ್ವೀನರ್- ಡಾ.ಶೇಕ್ ಬಾವ ಅಬೂದಾಬಿ
ಟ್ರಶರರ್- ಹಾಜಿ ಇಕ್ಬಾಲ್ ಸೇಠ್ ಶಿವಮೊಗ್ಗ
ವೈಸ್ ಚೇರ್ಮೇನ್ಸ್ – ಮುಹಮ್ಮದ್ ಹಾಜಿ ಸಾಗರ, ಡಾ.ಉಮರ್ ಹಾಜಿ ಬೆಂಗಳೂರು, ಅಬೂಬಕರ್ ಹಾಜಿ ರೈಸ್ಕೋ, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಗಂಗೊಳ್ಳಿ, ಮುಮ್ತಾಝ್ ಅಲಿ ಹಾಜಿ ಕೃಷ್ಣಾಪುರ, ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ಲತೀಫ್ ಶುಂಠಿಕೊಪ್ಪ, ಹಮೀದ್ ಸ‌ಅದಿ ಅಬೂದಾಬಿ, ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಅಯ್ಯೂಬ್ ಕೋಡಿ, ಜಮಾಲ್ ವಿಟ್ಲ,
ಕನ್ವೀನರ್ಸ್- ಖಮರುದ್ದೀನ್ ಗೂಡಿನಬಳಿ, ಅಬ್ದುಲ್ ಜಲೀಲ್ ನಿಝಾಮಿ, ಬಶೀರ್ ಬೊಳುವಾರ್, ಝೈನುದ್ದೀನ್ ಬೆಳ್ಳಾರೆ, ಇಬ್ರಾಹಿಂ ಬ್ರೈಟ್, ಇಕ್ಬಾಲ್ ಕಾಜೂರ್, ರಜಬ್ ಮೂಳೂರು, ಜಲೀಲ್ ಮೋಂಟುಗೋಳಿ, ನಾಸಿರ್ ಬಾಳೆಹೊನ್ನೂರು, ಇಬ್ರಾಹಿಂ ಯಾದ್‌ಗಾರ್, ವರದ ಗೌಸ್, ನವಾಝ್ ಹಾಜಿ, ನೇಶನಲ್ ಅಬ್ದುರ್ರಹ್ಮಾನ್, ಫಯಾಝ್ ಮೈಸೂರು, ಬಶೀರ್ ಟಿಪ್‌ಟಾಪ್, ಯಾಕೂಬ್ ಶಿವಮೊಗ್ಗ, ಇಕ್ಬಾಲ್ ನಾವುಂದ, ಹಬೀಬ್ ಕೋಯ, ಅಬ್ದುಸ್ಸಮದ್ ಬೈಂದೂರು, ನ‌ಹೀಮ್ ಬಾಷಾ ಕುಂದಾಪುರ, ಫರೀದ್ ಸಾಹೇಬ್ ಉಡುಪಿ, ಯಾಕೂಬ್ ಹೊಸನಗರ,
ಕೋ-ಆರ್ಡಿನೇಟರ್ – ಅಶ್ರಫ್ ಕಿನಾರ ಮಂಗಳೂರು.