ಉಡುಪಿ: ಮಲ್ಪೆ ಹನುಮಾನ್ ನಗರ ಎಂಬಲ್ಲಿ ಹಿಂದೂ ಸಹೋದರಿಯೋರ್ವರ ಮನವಿಯ ಮೇರೆಗೆ ತುರ್ತಾಗಿ ಸ್ಪಂದಿಸಿ 2 ಮನೆಯ ಮೇಲೆ ಅಪಾಯದಂಚಿನಲ್ಲಿದ್ದ ಮರಗಳ ರೆಂಬೆ ಕೊಂಬೆಗಳನ್ನು SSF ಉಡುಪಿ ಡಿವಿಷನ್ ಹೆಲ್ಪ್ ಡೆಸ್ಕ್ ಹಾಗೂ HSDF ಸಹಾಯ್ ತಂಡದ ಕಾರ್ಯಕರ್ತರು, ಕಡಿದು ತೆರವುಗೊಳಿಸಿ ಮಾನವೀಯ ಸೇವೆ ನೀಡಿದರು.

ಈ ಕಾರ್ಯಚರಣೆಯಲ್ಲಿ ತಂಡದ ನಾಯಕರಾದ ಮಜೀದ್ ಕಟಪಾಡಿ, ಸದಸ್ಯರಾದ ಸಿದ್ದೀಕ್ ಸಂತೋಷ್ ನಗರ, ಬಿಲಾಲ್ ಮಲ್ಪೆ, ಬುರ್ಹಾನ್ ಮಲ್ಪೆ, ಆಸೀಪ್ ಸರಕಾರಿಗುಡ್ಡೆ, ಅಲ್ತಾಪ್ ಮಲ್ಪೆ, ಸರ್ಪಾರಾಝ್ ಮಲ್ಪೆ, ಇಬ್ರಾಹಿಂ ರಂಗನಕೆರೆ, ಸುಲೈಮಾನ್ ರಂಗನಕೆರೆ, ಶಿಫಾನ್ ಸರಕಾರಿಗುಡ್ಡೆ ಉಪಸ್ಥಿತಿ ಇದ್ದು, ಮುತ್ತಲಿಬ್ ರಂಗನಕೆರೆ ವಾಹನ ವ್ಯವಸ್ಥೆ ಹಾಗೂ ಶಂಶುದ್ದೀನ್ ಆರ್.ಕೆ ಮತ್ತು ರಹಿಂ ಬಾಯ್ ಇವರ ಮುಖಾಂತರ ಸುದಿರ್ ಉಡುಪಿ ಇವರು ಕ್ರೇನ್ ನೀಡಿ ಸಹಕರಿಸಿದರು.

ಜಿಲ್ಲಾದ್ಯಂತ ಕರ್ನಾಟಕ ಮುಸ್ಲಿಂ ಜಮಾಅತ್ ನೇತ್ರತ್ವದ ಉಡುಪಿ ಸಹಾಯ್ ತಂಡದ ನೇತ್ರತ್ವದಲ್ಲಿ ಈಗಾಗಲೇ ಹಲವಾರು ಸಮಾಜಮುಖಿ ಸೇವೆಯನ್ನು ಮಾನವಿಯ ನೆಲೆಯಲ್ಲಿ ಮಾಡುತ್ತಿದ್ದು, ಇಂತಹ ಇನ್ನಷ್ಟು ಸೇವೆಗೈಯಲು ಈ ತಂಡವು ಸದಾ ಮುಂಚೂಣಿಯಾಗಿರುತ್ತೆವೆ ಎಂದು ತಂಡದ ನಾಯಕರೊರ್ವರಾದ ಮಜೀದ್ ಕಟಪಾಡಿ ಇವರು. ತಿಳಿಸಿದರು.
Ⓜ️edia©️ell, Udupi division







