ರಿಯಾದ್; ಮಾ26, ಹಸನಿಯ್ಯ ಚಾರಿಟೇಬಲ್ &ಎಜ್ಯುಕೇಶನಲ್ ಸೆಂಟರ್ ಅಡ್ಡೈ ಪಟ್ಟೂರು(ಕೊಕ್ಕಡ) ಇದರ ಸೌದಿ ಅರೇಬಿಯಾ ರಿಯಾದ್ ಸಮಿತಿ ರಚನೆ ಹಾಗೂ ತ್ರೈಮಾಸಿಕ ಸ್ವಲಾತ್ ಮಜ್ಲಿಸ್ ಉಧ್ಘಾಟನೆಯೂ ದಿನಾಂಕ 26-03-2021 ಶುಕ್ರವಾರ ಅಮೀರ್ ಹಾಜಿ ಕಲ್ಲಾಪು ರವರ ಅಧ್ಯಕ್ಷತೆಯಲ್ಲಿ ರಿಯಾದಿನ ಶಿಫಾದಲ್ಲಿ ನಡೆಯಿತು.

ಅಬ್ದುಲ್ ರಝ್ಝಾಕ್ ಹಾಜಿ ಮಾಚಾರ್ ಹಾಗೂ ಅಝೀಝ್ ಮದನಿ ಕೊಕ್ಕಡ ರವರು ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು.
ಸಿರಾಜ್ ಸಾಲೆತ್ತೂರು ಕಿರಾತ್ ಪಠಿಸಿ, ಮಾಚಾರ್ ಅಬ್ದುರ್ರಝಾಕ್ ಮುಸ್ಲಿಯಾರ್ ಉಧ್ಘಾಟಿಸಿದರು.
ನಂತರ ನೂತನ ಹಸನಿಯ್ಯ ರಿಯಾದ್ ಸಮಿತಿ ರಚಿಸಿ ಅಮೀರ್ ಅಬ್ದುಲ್ ಖಾದರ್ ಹಾಜಿಯವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಮದನಿ ಕೊಕ್ಕಡ, ಕೋಶಾಧಿಕಾರಿಯಾಗಿ ಅಬ್ದುರ್ರಝ್ಝಾಕ್ ಹಾಜಿ ಮಾಚಾರ್, ಉಪಾಧ್ಯಕ್ಷರುಗಳಾಗಿ ಹಮೀದ್ ಭಾರತ್(ಮಠ), ಕೆ.ಎಂ.ಎಸ್ ಅಶ್ರಫ್ ನೀರಕಟ್ಟೆ, ಕಾರ್ಯದರ್ಶಿಗಳಾಗಿ ರಿಯಾಝ್ ನೆಲ್ಯಾಡಿ, ಅಬ್ದುಲ್ ಅಝೀಝ್ ನೆಕ್ಕಿಲ, ಸಲಹೆಗಾರರಾಗಿ ಸ್ವಾಲಿಹ್ ಬೆಳ್ಳಾರೆ, ಅಬೂಬಕ್ಕರ್ ಸಾಲೆತ್ತೂರು, ಸಿತಾರ್ ಹಾಜಿ ಯರನ್ನು ಆರಿಸಲಾಯಿತು.
ಸದಸ್ಯರುಗಳಾಗಿ ಝಾಕಿರ್ ಪಂಜ, ಲತೀಫ್ ನೆಲ್ಯಾಡಿ, ರಝ್ಝಾಕ್ ಪುತ್ತೂರು, ಸಲೀಂ ಮಠ, ಹನೀಫ್ ನೆಲ್ಯಾಡಿ, ಸಿರಾಜ್ ಸಾಲೆತ್ತೂರು, ಇಸ್ಮಾಯಿಲ್ ಉಧ್ಯಾವರ, ಮೊಹಮ್ಮದ್ ಮುಸ್ತಫಾ, ರಝ್ಝಾಕ್ ಶಕಲೇಶಪುರ, ಹಾರಿಸ್ ಕನ್ಯಾನ, ಶಫೀಕ್ ಉಜಿರೆ, ಮುಸ್ತಫಾ ಕುಶಾಲನಗರ ಮೊದಲಾದವರನ್ನು ಆರಿಸಲಾಯಿತು.
ಹಮೀದ್ ಮಠ ಧನ್ಯವಾದ ಅರ್ಪಿಸಿದರು.
ವರದಿ: ರಿಯಾ ನೆಲ್ಯಾಡಿ
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ