ಮಂಗಳೂರು:ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಮಂಗಳೂರು ಝೋನ್ ದ್ವೈವಾರ್ಷಿಕ ಮಹಾಸಭೆಯು ಕಂಕನಾಡಿ ಮದ್ರಸ ಹಾಲ್ ನಲ್ಲಿ ಇಂದು ಝೋನ್ ಅಧ್ಯಕ್ಷ ಬಶೀರ್ ಮದನಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಉದ್ಘಾಟಿಸಿದರು. ರಾಜ್ಯ ಜಂಇಯ್ಯತುಲ್ ಉಲಮಾ ಮುಖಂಡರಾದ
ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ತರಗತಿ ನಡೆಸಿಕೊಟ್ಟರು. ಕಂಕನಾಡಿ ಮಸೀದಿ ಖತೀಬರಾದ ಅಬ್ದುಲ್ ರಹಿಮಾನ್ ಸಅದಿ, ಶುಭಾಶಯಗಳನ್ನು ಕೋರಿದರು. ಎಸ್ ಜೆ ಎಂ ಜೆಪ್ಪು ರೇಂಜ್ ಅಧ್ಯಕ್ಷ ಸತ್ತಾರ್ ಸಖಾಫಿ,ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಮುಸ್ಲಿಯಾರ್ ಬಜಾಲ್ ನಂತೂರು,ಮಂಗಳೂರು ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಅದಿ ವಾಮಂಜೂರು ಅಬೂಬಕ್ಕರ್ ಮದನಿ ಅಜ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2021-2023ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು, ಪ್ರಧಾನ ಕಾರ್ಯದರ್ಶಿಯಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು ಕೋಶಾಧಿಕಾರಿಯಾಗಿ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ ಮತ್ತು ಇಸ್ಮಾಯಿಲ್ ಬುಖಾರಿ ಮದನಿ ಮಂಚಿ ಜೊತೆ ಕಾರ್ಯದರ್ಶಿ ಗಳಾಗಿ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಮತ್ತು ಅಬ್ದುಲ್ ಖಾದರ್ ಸಅದಿ ಬೋಂದೆಲ್ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರುಗಳಾಗಿ ಮಹಮ್ಮದ್ ಮದನಿ ಜೆಪ್ಪು ಉಸ್ತಾದ್,ಆತೂರು ಸಅದ್ ಮುಸ್ಲಿಯಾರ್,ಅಕ್ಬರ್ ಮದನಿ ಬಜಾಲ್,ಇಸಾಕ್ ಸಖಾಫಿ ಮರಕಡ,ಶರೀಫ್ ಮುಸ್ಲಿಯಾರ್ ಗುಡ್ಡೆ ಅಂಗಡಿ,ಕಲಂದರ್ ಶಾಫಿ ಮದನಿ,ಅಬೂಬಕ್ಕರ್ ಮದನಿ ಆತೂರು,ತಾಜುದ್ದೀನ್ ಸಖಾಫಿ ಬೀರ್ಪುಗುಡ್ಡೆ,ಸಿರಾಜುದ್ದೀನ್ ನಿಝಾಮಿ ಕೂಳೂರು,ಝುಬೈರ್ ಮುಸ್ಲಿಯಾರ್ ಇವರನ್ನು ಆಯ್ಕೆ ಮಾಡಲಾಯಿತು.
ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ಸತ್ತಾರ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ