janadhvani

Kannada Online News Paper

ಮುಡಿಪು ಎಡ್ಯುಪಾರ್ಕ್‍‍ನಲ್ಲಿ ಅರಳಿದ ಪ್ರತಿಭೆ

ಕೊಣಾಜೆ: ಪವಿತ್ರ ಖುರ್‍ಆನಿನ ಒಂದು ಜುಝ್ಅ್ ಸಂಪೂರ್ಣ ಕಂಠಪಾಠ ಮಾಡುವ ಮೂರು ವರ್ಷದ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದ ಮುಡಿಪು ಎಡ್ಯೂ ಪಾರ್ಕ್ ವಿದ್ಯಾರ್ಥಿನಿ, ಆಯಿಷಾ ಯಾಫಿಯಾಳನ್ನು (6)ಸೈಯ್ಯಿದ್ ಆದೂರು ತಂಙಳ್ ಅವರು ಸನ್ಮಾನಿಸಿದರು.

ಮೂರು ವರ್ಷದ ಖುರ್‍ಆನ್ ಕೋರ್ಸಿನಲ್ಲಿ ಕೇವಲ ಖುರ್‍ಆನ್ ಮಾತ್ರವಲ್ಲದೆ, ಹಲಾವರು ದ್ಸಿಕ್ರ್, ತಸ್ಬೀಹ್ ಮತ್ತು ಸ್ವಲಾತ್‍ಗಳನ್ನು ಯಾಫಿಯಾ ಕಂಠ ಪಾಠ ಮಾಡಿರುತ್ತಾಳೆ

“ಬಾಲ್ಯದಲ್ಲಿಯೇ ಮಕ್ಕಳು ದಾರಿ ತಪ್ಪುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಸಮುದಾಯದ ಎಳೆ ಮನಸುಗಳಲ್ಲಿ ಧಾರ್ಮಿಕ ಜ್ಙಾನ ತುಂಬಿ, ಮಕ್ಕಳನ್ನು ಬಾಲ್ಯದಲ್ಲಿಯೇ ಇಸ್ಲಾಮಿನ ಬೋಧಕರನ್ನಾಗಿಸುವ “ಝಹ್ರತುಲ್ ಖುರ್‍ಆನ್ ಎಡ್ಯು ಪಾರ್ಕ್‍ ಮುಡಿಪು” ಇದರ ಶಿಲ್ಫಿ, ಸೈಯ್ಯಿದ್ ಆದೂರು ತಂಙಳ್ ಉಸ್ತಾದರ ಶ್ರಮ ನಿಜಕ್ಕೂ ಶ್ಲಾಘನೀಯ.
ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನು ಮನೆ ಮಕ್ಕಳಂತೆ ನೋಡಿ ನಯ, ವಿನಯದಿಂದ ಲಾಲಿಸಿ ಪಾಲಿಸುತ್ತಿರುವ ಝಹ್ರತುಲ್ ಖುರ್‍ಆನಿನ ಶಿಕ್ಷಕಿಯರಿಗೆ ಯಾಫಿಯಾಳ ಪೋಷಕರು ಕೃತಜ್ಙತೆಯನ್ನು ಸಲ್ಲಿಸಿರುತ್ತಾರೆ.

ವಿದ್ಯಾರ್ಥಿನಿ ಯಾಫಿಯ ಇಬ್ರಾಹಿಮ್ ಅರ್ಕಾಣ ಮತ್ತು ಸಕೀನಾ ದಂಪತಿಗಳ ಪುತ್ರಿ

error: Content is protected !! Not allowed copy content from janadhvani.com