ಸಲ್ಮಾನಿಯ, ಬಹರೈನ್: ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಕೆಸಿಎಫ್ ದಿನಾಚರಣೆ ಪ್ರಯುಕ್ತ ಸ್ವಯಂ ಪ್ರೇರಿತವಾಗಿ ನಡೆದ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯ ಮೆಡಿಕಲ್ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಫೆಬ್ರವರಿ 5 ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಅಬ್ದುಲ್ ಖಾದರ್ ಉಸ್ತಾದ್ ರವರ ದುಃಆ ಮೂಲಕ ಆರಂಭಗೊಂಡ ಶಿಬಿರದಲ್ಲಿ ಕೆಸಿಎಫ್ ನ ಸದಸ್ಯರು ಮತ್ತು ಇಲ್ಲಿನ ಸ್ವದೇಶಿಗಳು ವಿದೇಶಿಯರು ಸೇರಿ ನೂರರಷ್ಟು ಮಿಕ್ಕ ರಕ್ತದಾನಿಗಳು ಭಾಗವಹಿಸಿದ್ದರು.

ಕೆಸಿಎಫ್ ಬಹರೈನ್ ನ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ , ಕಾರ್ಯದರ್ಶಿ ಹಾರಿಸ್ ಸಂಪ್ಯ , ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಹಾಗೂ ಸಂಘಟನೆಗಳು ನೇತಾರರೂ ಸದಸ್ಯರುಗಳು ರಕ್ತದಾನ ಮಾಡಿ ಮಾದರಿಯಾದರು.
ಕೆಸಿಎಫ್ ಬಹರೈನ್ ಸೌತ್ ಝೋನ್ ಇದರ ಸಂಘಟನಾ ವಿಭಾಗದ ಅಧ್ಯಕ್ಷರಾದ ಶಾಫಿ ಕಂಬಲಬೆಟ್ಟುರವರ ನೇತೃತ್ವದಲ್ಲಿ ನಡೆದ ಶಿಬಿರವು ಕೋವಿಡ್ ನ ಎಲ್ಲಾ ಮಾನದಂಡಗಳನ್ನು ಪಾಲಿಸಿ ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ ನಡೆಸಿದ ಕಾರ್ಯವೈಖರಿಯನ್ನು ಕಂಡು ಸಲ್ಮಾನಿಯ ಮೆಡಿಕಲ್ ಸೆಂಟರ್ ನ ಅಧಿಕಾರಿಗಳು ಸಂಘಟಕರನ್ನು ಪ್ರಶಂಶಿಸಿದರು.

ಶಿಬಿರದ ಉಸ್ತುವಾರಿಯನ್ನು ಕೆಸಿಎಫ್ ಬಹರೈನ್ ಇದರ ಸಾಂತ್ವನ ವಿಭಾಗದ ನೇತಾರರಾದ ಕರೀಮ್ ಮಾಝಾ ,ಹನೀಫ್ ಜಿಕೆ ರವರು ವಹಿಸಿದ್ದರು.
ಶಿಬಿರಾರ್ಥಿಗಳಿಗೆ ಬರಲು ವಾಹನ ಸೌಕರ್ಯಗಳನ್ನು ಒದಗಿಸಲಾಯಿತು ಹಾಗೂ ಬೆಳಗ್ಗಿನ ಲಘು ಫಲಹಾರ ಜೊತೆಗೆ ಹಣ್ಣು ಹಂಪಲು ವಿತರಿಸಲಾಯಿತು. ಪ್ರತೀ ರಕ್ತಧಾನಿಗಳಿಗೆ ಕೆಸಿಎಫ್ ಬಹರೈನ್ ವತಿಯಿಂದ ಮೆಚ್ಚುಗೆ ಪ್ರಮಾಣ ಪತ್ರ ಗಳನ್ನು ನೀಡಲಾಯಿತು.
ಶಿಬಿರದಲ್ಲಿ ಕೆಸಿಎಫ್ ಬಹರೈನ್ ನ ರಾಷ್ಟ್ರೀಯ,ಝೋನ್ ಮತ್ತು ಸೆಕ್ಟರ್ ಗಳ ನೇತಾರರೂ ಹಾಗೂ ಬಹರೈನ್ ನ ವಿವಿಧ ಸಂಘಟನೆಗಳ ನೇತಾರರೂ ಭಾಗವಹಿಸಿದ್ದರು
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ