ದಮ್ಮಾಮ್: ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ದಮ್ಮಾಮ್ ಮುಬಾರಕಿಯ್ಯಾ ಸಮಿತಿಯ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನಮ್ಮನ್ನಗಲಿದ ಸ್ಥಾಪನೆ ಸಂಘಟನೆಗಳ ಹಾಗೂ ಕುಟುಂಬದಿಂದ ಮರಣ ಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಬಹು ಅಬ್ದುಲ್ ಕರೀಂ ಲತ್ವೀಫಿ ಸೋಕಿಲರವರ ನೆತೃತ್ವದಲ್ಲಿ ನಡೆಯಿತು.
ದಮ್ಮಾಮ್ ಮುಬಾರಕಿಯ್ಯಾ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷರು ಅಬ್ದುಲ್ ಲತೀಫ್ ತೆಕ್ಕಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಮೂಡಡ್ಕ ಸೌದಿ ನ್ಯಾಶನಲ್ ಸಮಿತಿಯ ಪ.ಕಾರ್ಯದರ್ಶಿ ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ಜಲಾಲುದ್ದೀನ್ ಬಾಹಸನಿ ಉಳ್ತೂರು, ಬಶೀರ್ ಮದನಿ ನೆಲ್ಲಿಪಲಿಕೆ, ಅಬ್ದುರ್ರಹ್ಮಾನ್ (ಸುಕೂರು) ಹೊಸನಗರ, ನಝೀರ್ ಜೋಕಟ್ಟೆ, ಸ್ವಾದಿಕ್ ಕಾನತ್ತಡ್ಕ, ಉಪಸ್ಥಿತರಿದ್ದರು. ಬಶೀರ್ ಗೋಳಿಯಂಗಡಿ ಕಿರಾಅತ್ ಪಠಿಸಿದರು ಜಲಾಲುದೀನ್ ಬಾಹಸನಿ ಉಳ್ತೂರುರವರು ಸಭೆಯನ್ನು ಉದ್ಘಾಟಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ ಗತವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿಲಾಯಿತು.
ಮೂಡಡ್ಕ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಷಣದಲ್ಲಿ ಸ್ಥಾಪನೆಯ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ನಂತರ ಮೂಡಡ್ಕ ಮುಭಾರಕಿಯ್ಯಾ ದಮ್ಮಾಮ್ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದರು.
ಗೌರವ ಅಧ್ಯಕ್ಷರು ಹಂಝಾ ಮದ್ದಡ್ಕ, ಸಲಹೆಗಾರರಾಗಿ ಉಮರುಲ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ, ಅಬ್ದುಲ್ ಕರೀಂ ಲತ್ವೀಫಿ ಸೋಕಿಲ.ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ತೆಕ್ಕಾರ್, ಪ್ರದಾನ ಕಾರ್ಯದರ್ಶಿ ಝಕರಿಯ್ಯ ಕಲ್ಲಾಜೆ, ಕೋಶಾಧಿಕಾರಿ ಬಶೀರ್ ಗೋಳಿಯಂಗಡಿ, ಉಪಾಧ್ಯಕ್ಷರುಗಳಾಗಿ ಸಲೀಂ ಮದನಿ ಕನ್ಯಾನ,ಮುಹಮ್ಮದ್ ಶರೀಪ್ ಕೈಕಂಬ, ಜೊತೆ ಕಾರ್ಯದರ್ಶಿಗಳಾಗಿ ಆಸೀಫ್ ಬೊಳಿಯಾರ್, ಆಸೀಫ್ ಕುಂದಾಪುರ, ಸಂಚಾಲಕರಾಗಿ ಹಾರೀಶ್ ಕೈರೋಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಬಂಟ್ವಾಳ, ಅಬ್ದುಲ್ ಗಫೂರ್, ಸಿನಾನ್ ನಾವುಂದ, ಇಕ್ಬಾಲ್ ಉಡುಪಿ, ಶಿಯಾಬ್ ಅಳಕೆಮಜಲು, ವಾಸಿಂ ಅಂಕೋಲಾ, ಇಮ್ರಾನ್ ಸಾಗರ, ಎಂಬವರನ್ನು ಆಯ್ಕೆ ಮಾಡಲಾಯಿತು. ಬಶೀರ್ ಮದನಿ ನಾಗರಕೋಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಝಕರಿಯ್ಯಾ ಕಲ್ಲಾಜೆ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ