janadhvani

Kannada Online News Paper

ಮಂಡ್ಯ :ಎಸ್ಸೆಸ್ಸೆಫ್ ರಾಜ್ಯ ನಾಯಕರ ಜಿಲ್ಲಾ ಭೇಟಿ

ಮದ್ದೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ನಾಯಕರ ಜಿಲ್ಲಾ ಭೇಟಿ ಹಾಗೂ ಸಮಾಲೋಚನಾ ಸಭೆ ಮಂಡ್ಯ ಜಿಲ್ಲೆಯ ಮದ್ದೂರು ದೌ‌ಡ್‌ತೇ ಪೀರ್ ದರ್ಗಾ ಸಭಾಂಗಣದಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಮದ್ದೂರು ಜಾಮಿಯಾ ಸಮಿತಿ ಸದಸ್ಯ ನಿಸಾರ್ ಅಹ್ಮದ್, ಮೌಲಾನಾ ನವಾಝ್ ರಝ್ವಿ ಮಾತನಾಡಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ರಾಜ್ಯ ನಾಯಕರಾದ ಸಫ್ವಾನ್ ಚಿಕ್ಕಮಗಳೂರು, ಕಬೀರ್ ಅಮ್ಜದಿ, ಮುಹಮ್ಮದ್ ಅನ್ಸಾರ್ ಮಂಡ್ಯ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.