ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಗೆ ಜಬಲನ್ನೂರಿನಲ್ಲಿ ನೂತನ ಕಛೇರಿ ‘ಕೆಸಿಎಫ್ ಭವನ’ ವನ್ನು ಸೆಕ್ಟರ್ ಅಧ್ಯಕ್ಷರು ಉಮರುಲ್ ಫಾರೂಕ್ ಹನೀಫಿ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಗಬ್ಗಲ್ ಶುಭ ಹಾರೈಸಿ ಮಾತಾನಾಡಿದರು. ಸೆಕ್ಟರ್ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ, ಜಬಲನ್ನೂರು ಯೂನಿಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ವೇಣೂರು, ಸದಸ್ಯರಾದ ಹಾರಿಸ್ ಬೋವು, ಕುದೈ ಯೂನಿಟ್ ಸದಸ್ಯರಾದ ಅಬ್ದುಲ್ ಖಾದರ್ ಮಠ, ಅಬ್ದುಲ್ ಜಲೀಲ್ ಕಬಕ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಕೆಸಿಎಫ್ ಜಬಲನ್ನೂರು ಯೂನಿಟ್ ನ ಆತ್ಮೀಯ ಮಜ್ಲಿಸ್ ನಡೆಸಿ ಕಾರ್ಯಕ್ರಮವನ್ನು ಜಬಲನ್ನೂರು ಯೂನಿಟ್ ಹಾಗೂ ಸೆಕ್ಟರ್ ಶಿಕ್ಷಣ ಇಲಾಖೆ ಅಧ್ಯಕ್ಷರು ಆರ್.ಕೆ ಅಬ್ದುಲ್ ರಝ್ಝಾಖ್ ಉಸ್ತಾದ್ ಮಾತಾಡಿ ಸ್ವಲಾತ್ ನ ಮಹತ್ವವನ್ನು ವಿವರಿಸಿ ಸೇರಿದವರನ್ನು ಸ್ವಾಗತಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಧನ್ಯವಾದಗೈದರು.







