janadhvani

Kannada Online News Paper

ಎಸ್ಸೆಸ್ಸೆಫ್ ಪಳ್ಳಿಮಜಲು ಶಾಖೆಗೆ ನವ ಸಾರಥ್ಯ

S S F ಪಳ್ಳಿಮಜಲು ಶಾಖೆಯ ಮಹಾಸಭೆಯು ಡಿ.10 ರಂದು ಪಳ್ಳಿಮಜಲು ಎಸ್.ವೈ.ಎಸ್.ಎಸ್.ಎಸ್.ಫ್ ಆಫೀಸಿನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಮೀರ್ ಕಾವಿನಮೂಲೆ ಯವರು ವಹಿಸಿದ್ದರು. ಕಾರ್ಯಕ್ರಮಕ್ಕೆ SSF ಪುತ್ತೂರು ಡಿವಿಷನ್ ನಾಯಕರೂ, ಸ್ಥಳೀಯ ಉಸ್ತಾದರೂ ಆದ ಹುಸೈನ್ ಜೌಹರಿ ದುಆದ ಮೂಲಕ ಚಾಲನೆ ನೀಡಿದರು.ಇಕ್ಬಾಲ್ ಅಜಿಪಿಲವರು ಸ್ವಾಗತಿಸಿದರು..ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಬಂದತಹ SSF ಬೆಳ್ಳಾರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಫ಼ೀಕ್ ಅಮ್ಜದಿಯವರು ಸಂಘಟನೆಯ ಮಹತ್ವದ ಕುರಿತು ತರಗತಿ ನಡೆಸಿದರು.

ಸಮಿತಿಯ ನೂತನ ಸಾರಥಿಗಳು
ಅಧ್ಯಕ್ಷ: ರಾಶಿದ್ ಪಿ.ಎಚ್, ಪ್ರ. ಕಾರ್ಯದರ್ಶಿ: ಉಸ್ಮಾನ್ ಬೀಡು, ಕೋಶಾಧಿಕಾರಿ: ಜಬ್ಬಾರ್ ಬಂಡಿಮಜಲ್ ರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಸಿನಾನ್ ಮುಸ್ಲಿಯಾರ್ ಬೀಡು, ಕಾರ್ಯದರ್ಶಿಗಳಾಗಿ.ಶಮೀರ್.ಕೆ .ಶಿಹಾಬ್, ನಾಝಿಂ, ಶರೀಫ್ ಮುಸ್ಲಿಯಾರ್, ಶರೀಫ್.ಕೆ.ಎಂ, ಸ್ವಾದಿಕ್ ಮುಸ್ಲಿಯಾರ್ ರವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಅಜಿಪಿಲ,ಇಸ್ಮಾಯಿಲ್ ಹನೀಫಿ, ಮಿಸ್ಹಬ್ , ಶಮ್ಮಾಸ್, ಇಹ್ಸಾನ್, ಅಝ್ವಾನ್, ರಶೀದ್ ಪಳ್ಳಿಮಜಲ್ ರವರನ್ನು ಆರಿಸಲಾಯಿತು.

ಸಭೆಯಲ್ಲಿ ಸುಳ್ಯ ಡಿವಿಷನ್ ನಾಯಕರಾದ ಕಲಾಂಝುಹ್ರಿ ಉಸ್ತಾದರು ಶುಭಹಾರೈಸಿ,ಪ್ರಾರ್ಥನೆ ನಡೆಸಿದರು,ಎಸ್.ವೈ.ಎಸ್ ಜಿಲ್ಲಾ ನಾಯಕರಾದ ಸಂಶುದ್ದೀನ್ ಝಂ.ಝಂ ಬೆಳ್ಳಾರೆ ಸೆಂಟರ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸೆಲೆಕ್ಟ್ ಉಪಸ್ಥಿತರಿದ್ದರು.

ನೂತನ ಸಾರಥಿಗಳು ಸಭೆಯನ್ನುದ್ದೇಶಿಸಿ ಮಾತುಗಳನ್ನಾಡಿ,ಕೊನೆಯಲ್ಲಿ ಜಬ್ಬಾರ್ ಬಂಡಿಮಜಲು ಧನ್ಯವಾದ ಸಮರ್ಪಿಸಿದರು.