ನಾವುಂದ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಕೋಯನಗರ ಯೂನಿಟ್ ಮಹಾಸಭೆಯು ಇತ್ತೀಚೆಗೆ ಕೋಯನಗರ ನೂರುಲ್ ಹುದಾ ಮಸೀದಿಯಲ್ಲಿ ನಡೆಯಿತು.
ಶಾಖಾಧ್ಯಕ್ಷರಾದ ಕೆ. ಎ. ಮುಹಮ್ಮದ್ ಮುಸ್ತಫರವರ ಸಭಾಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರೂ, ಸ್ಥಳೀಯ ಇಮಾಮರೂ ಆದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ರವರು ಉದ್ಘಾಟಿಸಿ ಶುಭ ಹಾರೈಸಿದರು. ನಾವುಂದ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ಅಬ್ದುಲ್ಲತೀಫ್ ಅಲ್ – ಫಾಳಿಲಿಯವರು ಸಂಘಟನಾ ತರಬೇತಿ ನಡೆಸಿ ಕೊಟ್ಟರು.
ಮುನೀರ್ ಸಖಾಫಿ ಸುಳ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು. ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರಗಳ ಅಂಗೀಕಾರದ ಬಳಿಕ 2021-22ನೇ ಸಾಲಿನ ನೂತನ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಮುನೀರ್ ಸಖಾಫಿ ಸುಳ್ಯ, ಅಡ್ವಕೇಟ್ ಇಲ್ಯಾಸ್ ಕೆ.ಎಂ. ನೂತನ ಅಧ್ಯಕ್ಷರಾಗಿ ನೌಶಾದ್ ರೋಯಲ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಗಂಗಾವಳಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಯಾಸಿರ್, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮುಝೈರ್ ಹಾಗೂ ಮುಹಮ್ಮದ್ ನವೀಝ್, ಕಾರ್ಯದರ್ಶಿಗಳಾಗಿ ಇರ್ಫಾನ್ ಗಂಗಾವಳಿ, ಮುಹಮ್ಮದ್ ರಾಶಿಖ್, ಮುಹಮ್ಮದ್ ಅಲ್ಫಾಝ್, ಅಬ್ದುರ್ರಹ್ಮಾನ್, ಮುಹಮ್ಮದ್ ಅಶ್ರಫ್ ಕೆ.ಟಿ ಹಾಗೂ ಮುಹಮ್ಮದ್ ರಿಶಾದ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮುಸ್ತಫ, ಮುಹಮ್ಮದ್ ಮುಜ್ತಬ, ಮುಹಮ್ಮದ್ ಮುಝಮ್ಮಿಲ್, ಎನ್.ಸಿ.ನೌಶಾದ್, ಇದ್ರೀಸ್ ಶಾಫಿ, ಮುಹಮ್ಮದ್ ಜಾಬಿರ್, ಮುಹಮ್ಮದ್ ಸಿನಾನ್ ಹಾಗೂ ಮುಬಶ್ಶಿರ್ WFK ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಸಿ. ಮುಹಮ್ಮದ್. ಇರ್ಷಾದ್, ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷರಾದ ಬಿ. ಇ. ಮುಹಮ್ಮದ್ ಅಲಿ ಹಾಜಿ, ಮೊಹಲ್ಲಾ ಆಡಳಿತ ಸಮಿತಿ ನಾಯಕರಾದ ಮುಹಮ್ಮದ್ ಮುಲ್ಲಾ, ಮುಹಮ್ಮದ್ ಕಾರ್ಕಳ, ಅಶ್ರಫ್ ಚೆಂಗಲ್, ಕೆ.ಸಿ.ಎಫ್. ಕಾರ್ಯಕರ್ತ ಅಶ್ರಫ್ ಮುನ್ನಾ, ಊರಿನ ಹಿರಿಯರಾದ ಹುಸೈನ್ ಬೈಂದೂರು, ಅಬ್ದುಲ್ ವಹ್ಹಾಬ್, ಅಬ್ದುಲ್ ಖಾದರ್, ಮುಹಮ್ಮದ್ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಡ್ವಕೇಟ್ ಇಲ್ಯಾಸ್ ಕೆ.ಎಂ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಯಾಸಿರ್ ವಂದಿಸಿದರು.







