janadhvani

Kannada Online News Paper

ಬನ್ನೂರು: ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಪುತ್ತೂರು: ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಬನ್ನೂರು ಶಾಖೆಯ ಸದಸ್ಯತ್ವ ಆಭಿಯಾನಕ್ಕೆ ನವೆಂಬರ್ 13 ರಂದು ಚಾಲನೆ ನೀಡಲಾಯಿತು. ಹೃದಯವಿದೆಯಾ? ಸತ್ಯದ ಧ್ವನಿಯಾಗಲು.. ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 13 ರಿಂದ 30ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದೆ.

ಬನ್ನೂರು ಎಸ್.ವೈ.ಎಸ್ ಬ್ರಾಂಚ್‌ನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ರವರು ಶಾಖಾಧ್ಯಕ್ಷ ಜಬೀರ್ ಬನ್ನೂರು ರವರಿಗೆ ಸದಸ್ಯತ್ವದ ಪುಸ್ತಕ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಸದಸ್ಯತ್ವದ ಪ್ರಚಾರರ್ಥಕವಾಗಿ ಕಾರ್ಯಕರ್ತರು ಬ್ಯಾನರ್, ಪೋಸ್ಟರ್ ಪ್ರದರ್ಶಿಸಿದರು. ಸುನ್ನಿ ಸೆಂಟರ್‌ನ ಅಧ್ಯಕ್ಷ ಫಾರೂಕ್ ಬನ್ನೂರು, ಶಾಖಾ ಕಾರ್ಯದರ್ಶಿ ಉಲ್ಫಾತುಲ್ಲಾ ಬನ್ನೂರು, ಪುತ್ತೂರು ಸೆಕ್ಟರ್ ಜೊತೆ ಕಾರ್ಯದರ್ಶಿ ಹನೀಫ್ ಬನ್ನೂರು, ಶಾಖಾ ಜೊತೆ ಕಾರ್ಯದರ್ಶಿ ಅಬ್ದುಲ್ ಹಕ್ಕ್, ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು, ಕಾರ್ಯಕರ್ತರಾದ ಉಬೈದುಲ್ಲಾ, ಶಫೀಕ್, ನೌಫಲ್, ಸವಾದ್, ನಮ್ಶಾನ್, ಅಮೀಮ್, ಉಯಿಸಮ್, ಸುಹೈಲ್, ಮುಫೀದ್, ಸಿನಾನ್, ನಾಸೀರ್ ಉಪಸ್ಥಿತರಿದ್ದರು.

ಯುನಿಟ್ ಮೆಂಬರ್‌ಶಿಪ್ ಡೆವೆಲಪರ್ಸ್ (ಯುಎಂಡಿ) ನೇಮಕ:
ರಾಜ್ಯ ಸಮಿತಿ ನಿಯಮನುಸಾರ ಬನ್ನೂರು ಯುನಿಟ್ ಮೆಂಬರ್‌ಶಿಪ್ ಡೆವಲಪರ್ಸ್‌ಗಳಾಗಿ ಜಬೀರ್ ಬನ್ನೂರು, ಉಲ್ಫತುಲ್ಲಾ ಬನ್ನೂರು, ಜಾಹೀರ್ ಬನ್ನೂರು, ಸಫೀಕ್, ನೌಫಲ್ ಬನ್ನೂರು ರವರನ್ನು ನೇಮಕಗೊಳಿಸಲಾಯಿತು.

ಇಬ್ರಾಹಿಂ ಖಲೀಲ್ ಬನ್ನೂರು.