ಮಂಗಳೂರು: ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ರವರು ಮಾಡಿದಂತಹ ಭಾಷಣದ ವಿಡಿಯೋದಲ್ಲಿ ಅವರು,ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂಬಿತ್ಯಾದಿಯಾಗಿ ಉಲ್ಲೇಖಿಸಿ,ಮುಗ್ದ ಜನರ ಮತೀಯ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.
ಉಳ್ಳಾಲ, ಜಿಲ್ಲೆಗೆ ಕೈಲಾಸವಿದ್ದಂತೆ ಎಂಬುದು ಕಲ್ಲಡ್ಕ ಭಟ್ ರಿಗೆ ಅರಿವಿಲ್ಲ. ಉಳ್ಳಾಲದ ಜನತೆ ನೇತ್ರಾವತಿ ನದಿ ನೀರನ್ನು ಉಪಯೋಗಿಸಿ ಜೀವಿಸಿದ ಜನತೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಶರಣಾದ ವರ್ಗದ ವಂಶಸ್ತರಲ್ಲ ಉಳ್ಳಾಲದವರು, ಬದಲಾಗಿ ಪೋರ್ಚುಗೀಸರಿಗೆ ಸಿಂಹ ಸ್ವಪ್ನ ವಾದ ಸ್ವಾತಂತ್ರ್ಯ ಹೋರಾಟಗಾರ್ತಿ ಜೈನ ರಾಣಿ ಅಬ್ಬಕ್ಕಳ ವಂಶಸ್ತರು ಬದುಕುವ ನಾಡು ಉಳ್ಳಾಲ. ಮುಸ್ಲಿಮ್ ಮದನಿ ಧಾರ್ಮಿಕ ಕೇಂದ್ರ, ಸಂತ ಸಬೇಷ್ಟಿಯನ್ ಚರ್ಚ್, ಚೀರುಂಭ ಭಗವತಿ ಕ್ಷೇತ್ರ, ವೈದ್ಯನಾಥ ಕ್ಷೇತ್ರ, ಶ್ರೀ ಉಳ್ಳಾಲ್ತಿ ಕ್ಷೇತ್ರ, ಪಾಂಡ್ಯ ರಾಜ್ ಬಲ್ಲಾಳ್ ಸಂಸ್ಥೆ, ಮೊಗವೀರ ಶಿಕ್ಷಣ ಸಂಸ್ಥೆಗಳಂತಹ ಸೌಹಾರ್ಧ ಸ್ಥಳಗಳ ಸಂಗಮ ಬೀಡು ಆಗಿದೆ ಉಳ್ಳಾಲ.
ನಿಸರ್ಗ ರಮಣೀಯ ಸಮುದ್ರ ನೋಟದ ಪ್ರವಾಸಿ ತಾಣವಾಗಿದೆ ಉಳ್ಳಾಲ. ಮತ್ಸ್ಯ ಗಾರಿಕೆಯ ವೃತ್ತಿ ತಾಣ, ವಾಣಿಜ್ಯ ವೃದ್ದಿ ಕೇಂದ್ರವಾಗಿದೆ ಉಳ್ಳಾಲ ಉಪನಗರ . ಇಂತಹ ಸಂಪದ್ಬರಿತ ಕೈಲಾಸವನ್ನು ಕಲ್ಲಡ್ಕರು ಪಾಕಿಸ್ತಾನ ಎನ್ನುತ್ತಿರುವುದು ಅವರ ವಯಸ್ಸಿನ ದೋಷವಾಗಿದೆ ಹೊರತು ಇನ್ನೇನಲ್ಲ. ಕಲ್ಲಡ್ಕರು ಸಾರ್ವಜನಿಕ ಜೀವನದಿಂದ ನಿವೃತ್ತಿ ಗೊಳ್ಳುವುದು ಒಳಿತು.
ಕೆ.ಅಶ್ರಫ್
(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್