ಆನೆಕಲ್ಲು ಹನೀಫ್ ಸಖಾಫಿ ಉಸ್ತಾದರ ಶಿಷ್ಯಂದಿರ ನೂತನ ಸಮಿತಿ ಹಾಗೂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣೆ ಸಂಗಮ 8/10/2020 ರಂದು Zoom ಆನ್ಲೈನ್ ಮೂಲಕ ಹನೀಫ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.
ಶೈಖುನಾ ಉಸ್ತಾದರು ಮುಟ್ಟಂ, ಬಾಂಬಿಲ, ದೇಲಾಂಪಾಡಿ, ಆವಳ, ಪೇರೂರ್, ಮಾಂಙಾಡ್ ಎಂಬಿ ಸ್ಥಳಗಳಲ್ಲಿ ದರ್ಸ್ ರಂಗದಿಂದ ಹಲವಾರು ಶಿಷ್ಯಂದಿರನ್ನು ಸಮಾಜಕ್ಕೆ ಅರ್ಪಿಸಿದರು. ಇದೀಗ ಶಿಷ್ಯಂದಿರು ದೀನೀ ರಂಗದಲ್ಲಿ ಹಾಗೂ ಕೆಲಸ ನಿಮಿತ್ತ ಗಲ್ಫ್ ರಾಷ್ಟ್ರಗಳಲ್ಲಿ ಸುನ್ನತ್ ಜಮಾಅತಿನ ಸಂಘಟನೆಗಳಲ್ಲಿ ಗುರುತಿಸಿಕೊಂಡು ಕಾರ್ಯಚರಿಸುತ್ತಿದ್ದಾರೆ.
ಕಾರ್ಯಕ್ರಮವನ್ನು ಬಿ.ಎಸ್ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ (ದಮ್ಮಾಮ್) ಉದ್ಘಾಟನೆ ಮಾಡಿದರು. ನಂತರ ನೂತನ ಸಮಿತಿಗೆ ‘ಲಜ್ನತ್ ನುಸ್ರತುಲ್ ಮುಸ್ಲಿಮೀನ್’ (LNM) ಎಂದು ಉಸ್ತಾದರು ಹೆಸರನ್ನು ಘೋಷಿಸಿ ನೂತನ ಸಮಿತಿಗೆ ಚಾಲನೆ ನೀಡಿದರು. ಈ ಸಂದರ್ಭ ಇತೀಚೆಗೆ ನಮ್ಮನ್ನಗಲಿದ ಶೈಖುನಾ ತಾಜುಲ್ ಫುಖಾಅಹ್ ಬೇಕಲ್ ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಹೇಳಿ ಪ್ರಾರ್ಥನೆ ಮಜ್ಲಿಸ್ ನಡೆಸಲಾಯಿತು.

2020/2021 ವರ್ಷದ ನೂತನ ಪದಾಧಿಕಾರಿಗಳ ವಿವರ..
ನಿರ್ದೇಶಕರು: ಶೈಖುನಾ ಹನೀಫ್ ಸಖಾಫಿ ಉಸ್ತಾದ್ ಆನೆಕಲ್ಲು.
ಅಧ್ಯಕ್ಷರು: ಆರ್.ಕೆ ಅಬ್ದುಲ್ ಹಮೀದ್ ಮುಸ್ಲಿಯಾರ್ ರಂತಡ್ಕ.
ಪ್ರಧಾನ ಕಾರ್ಯದರ್ಶಿ: ಕಮರುದ್ದೀನ್ ಮುಸ್ಲಿಯಾರ್ ಆನೆಕಲ್ಲು.
ಕೋಶಾಧಿಕಾರಿ: ಆರ್.ಕೆ ಅಬ್ದುಲ್ ರಝ್ಝಾಖ್ ಮುಸ್ಲಿಯಾರ್ ರಂತಡ್ಕ.
ಉಪಾಧ್ಯಕ್ಷರುಗಳಾಗಿ ಉಮರುಲ್ ಫಾರೂಖ್ ಲತ್ವೀಫಿ ಸೋಕಿಲ, ಅಹ್ಮದ್ ಕಬೀರ್ ಸಅದಿ ಅಡ್ಯಾರ್ ಕಣ್ಣೂರು. ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಲತ್ವೀಫಿ ನಿರ್ಕಾಜೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ಜಿ.ನಗರ. ಸಂಘಟನೆ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ. ಸಂಚಾಲಕರಾಗಿ- ಮುಹಮ್ಮದ್ ಶರೀಫ್ ಹನೀಫಿ ಮುಡಿಪು, ನಾಸಿರ್ ಮದನಿ ಉರ್ನಿ. ಸಲಹೆಗಾರರಾಗಿ ಅಶ್ರಫ್ ಮದನಿ ಆನೆಕಲ್ಲು, ಶಾಫಿ ಮುಸ್ಲಿಯಾರ್ ಉರುಮಣೆ. ಸ್ವಲಾತ್ ಕೋಡಿನೆಟರಾಗಿ ಮೂಸ ಲತ್ವೀಫಿ ಆನೆಕಲ್ಲು, ಹನೀಫ್ ಮುಸ್ಲಿಯಾರ್ ಮಜಿರ್ಪಳ್ಳ. ಲೆಕ್ಕ ಪರಿಶೋಧಕರಾಗಿ ದಾವುದ್ ಅಶ್ರಫಿ ನಿರ್ಕಾಜೆ ಎಂಬವರನ್ನು ಆಯ್ಕೆ ಮಾಡಲಾಯಿತು.
ವರ್ಕಿಂಗ್ ಸದಸ್ಯರಾಗಿ ಉಸ್ಮಾನ್ ಮುಸ್ಲಿಯಾರ್ ಕುಂಡದಬೆಟ್ಟು, ಅಬ್ಬಾಸ್ ಮುಸ್ಲಿಯಾರ್ ಕೊಲ್ಯ, ರಶೀದ್ ಅಮಾನಿ, ಬಶೀರ್ ಮುಸ್ಲಿಯಾರ್ ಮೂರುಗೋಳಿ, ರಝಾಕ್ ಅಶ್ರಫಿ ನೆಲ್ಲಿಪಲಿಕೆ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನೈನಾಡ್, ಸ್ವಾದಿಕ್ ಮುಸ್ಲಿಯಾರ್ ಬಾಂಬಿಲ ಸ್ವಾದಿಕ್ ಮುಸ್ಲಿಯಾರ್ ಆನೆಕಲ್ಲು, ಅಬ್ಬಾಸ್ ಮುಸ್ಲಿಯಾರ್ ಕುಳವೈಳ್.
ಸದಸ್ಯರುಗಳಾಗಿ ಅಬ್ದುಲ್ ಶಹೀದ್ ಅಝ್ಹರಿ ಬಳ್ಳೂರು, ಸಿದ್ದೀಖ್ ಅಹ್ಸನಿ ಉರುಮನೆ, ಹನೀಫ್ ನಿಝಾಮಿ ಉರುಮಣೆ, ಹನೀಫ್ ಮುಸ್ಲಿಯಾರ್ ಉರುಮಣೆ, ಇಸ್ಮಾಯಿಲ್ ಮುಸ್ಲಿಯಾರ್ ಬಂಗೇರಕಟ್ಟೆ, ಅಬೂಬಕ್ಕರ್ ಮುಸ್ಲಿಯಾರ್ ಅಳಕೆ, ರಫೀಕ್ ಮುಸ್ಲಿಯಾರ್ ಪಾತೂರು, ಉಮರ್ ಮುಸ್ಲಿಯಾರ್ ಅಳಕೆ ಪಾತೂರು, ಸಮೀರ್ ಮುಸ್ಲಿಯಾರ್ ಬಾಂಬಿಲ, ಹಮೀದ್ ಮುಸ್ಲಿಯಾರ್ ತಲಕಳ, ಯೂಸುಫ್ ಮುಸ್ಲಿಯಾರ್ ದೇಲಂಪಾಡಿ,
ಅಬ್ದುಲ್ಲಾ ಮುಸ್ಲಿಯಾರ್ ದೇಲಂಪಾಡಿ, ಬಶೀರ್ ಮುಸ್ಲಿಯಾರ್ ರಂತಡ್ಕ, ಮಜೀದ್ ಸಅದಿ ತಲಕಳ, ರಫೀಕ್ ಮುಸ್ಲಿಯಾರ್, ರಶೀದ್ ಮುಸ್ಲಿಯಾರ್ ಕಡಂಬಾರ್, ರಹೀಮ್ ಮುಸ್ಲಿಯಾರ್ ಸುಕಂದಕಟ್ಟೆ, ರಫೀಖ್ ಮುಸ್ಲಿಯಾರ್ ಚಿಪ್ಪಾರ್, ರಫೀಖ್ ಮುಸ್ಲಿಯಾರ್ ಪುತ್ತೂರು.
ನೂತನ ಅಧ್ಯಕ್ಷರು ಆರ್.ಕೆ ಅಬ್ದುಲ್ ಹಮೀದ್ ಮುಸ್ಲಿಯಾರ್ ನೂತನ ಸಮಿತಿಗೆ ಶುಭಹಾರೈಸಿ ಮಾತಾನಾಡಿದರು. ಕಾರ್ಯಕ್ರಮವನ್ನು ಕಮರುದ್ದೀನ್ ಮುಸ್ಲಿಯಾರ್ ಆನೆಕಲ್ಲು (ಕತ್ತರ್) ಸ್ವಾಗತಿಸಿ, ಕೋಶಾಧಿಕಾರಿ ಆರ್.ಕೆ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ (ಮಕ್ಕಾ) ವಂದಿಸಿದರು.
ವರದಿ: AK ಲತ್ವೀಫಿ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ