ಮಾಣಿ : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ) ಎಸ್ ವೈ ಎಸ್ ಮಾಣಿ ಸೆಂಟರ್ ವತಿಯಿಂದ ದಿನಾಂಕ ಅಕ್ಟೋಬರ್ 9 ಶುಕ್ರವಾರದಂದು ಮಾಣಿ ದಾರುಲ್ ಇರ್ಶಾದ್ ವಿದ್ಯಾಲಯದಲ್ಲಿ ಮರ್ಹೂಂ ತಾಜುಲ್ ಫುಖಹಾ ಬೇಕಲ್ ಉಸ್ತಾದರ ಅನುಸ್ಮರಣೆ ಹಾಗೂ ಸೆಂಟರ್ ಕಾರ್ಯಾಗಾರ (CentEmp ಕ್ಯಾಂಪ್) ನಡೆಯಿತು.

ಉಡುಪಿ, ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಹಾಸನ ಜಿಲ್ಲಾ ಖಾಝಿಯಾಗಿ ನೇಮಕಗೊಂಡ ಝೈನುಲ್ ಉಲಮಾ ಮಾಣಿ ಉಸ್ತಾದರು ದುಆಃ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ ವೈ ಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಇಬ್ರಾಹಿಂ ಸಅದಿ ಮಾಣಿಯವರು ಅಧ್ಯಕ್ಷತೆ ವಹಿಸಿದರು,ಎಸ್ ವೈ ಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಎಸ್ ವೈ ಎಸ್ ರಾಜ್ಯ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಬೇಕಲ್ ಉಸ್ತಾದರ ಬಗ್ಗೆ ಸವಿಸ್ತಾರವಾಗಿ ವಿವರಿಸಿ,ಸಂಘಟನಾ ತರಗತಿಯನ್ನು ನಡೆಸಿಕೊಟ್ಟರು. ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಂ ಪದ್ಮುಂಜರವರು ಕಾರ್ಯಕರ್ತರೊಂದಿಗೆ ಚರ್ಚಾ ಭಾಷಣ ನಡೆಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸೆಂಟರ್ ಉಸ್ತುವಾರಿಯಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ರವರನ್ನು ಸೂರ್ಯ ಬ್ರಾಂಚ್ ಎಸ್ ವೈ ಎಸ್ ಹಾಗೂ ಸೆಂಟರ್ ವತಿಯಿಂದ ಸ್ಮರಣಿಕೆ ಹಾಗೂ ಶಾಲುಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾನಾಯಕರಾದ ಅಬ್ದುರ್ರಶೀದ್ ಸಖಾಫಿ ಗಡಿಯಾರ,ಖಾಸಿಂ ಹಾಜಿ ಮಿತ್ತೂರು,ಮುಹಮ್ಮದ್ ಕುಂಞಿ ಸರಳಿಕಟ್ಟೆ,ಎಂ ಹೆಚ್ ಖಾದರ್ ಹಾಜಿ,ಹೈದರ್ ಹಾಜಿ ಮೂರುಗೋಳಿ,ಸೆಂಟರ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರ್, ಸೆಂಟರ್ ನಾಯಕರಾದ ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರ್,ಹಬೀಬ್ ಶೇರ,ಸುಲೈಮಾನ್ ಸಅದಿ ಪಾಟ್ರಕೋಡಿ,ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ,ಅಬ್ದುಲ್ ಲತೀಫ್ ಸಅದಿ ಶೇರಾ,ಹೈದರ್ ಸಖಾಫಿ ಶೇರಾ,ರಫೀಕ್ ಮದನಿ ಪಾಟ್ರಕೋಡಿ,ಹನೀಫ್ ಮುಸ್ಲಿಯಾರ್ ಪೆರ್ನೆ, ಸುಲೈಮಾನ್ ಸೂರಿಕುಮೇರ್, ದಾವೂದ್ ಕಲ್ಲಡ್ಕ, ಪಿ ಹೆಚ್ ಅಬ್ದುಲ್ ಲತೀಫ್ ಕಲ್ಲಡ್ಕ, ಖಾಸಿಂ ಪಾಟ್ರಕೋಡಿ, ಇಬ್ರಾಹಿಂ ಹಾಜಿ ಪೇರಮುಗೇರ್,ಅಬ್ದುಲ್ ಖಾದರ್ ಹಾಜಿ ಶೇರಾ, ಮೊಯ್ದೀನ್ ಕುಟ್ಡಿ ಪೆರ್ನೆ, ಅಬೂಬಕ್ಕರ್ ನಚ್ಚಬೆಟ್ಟು, ಸೆಂಟರ್ ಇಸಾಬಾ ಅಮೀರ್ ಯಾಕೂಬ್ ನಚ್ಚಬೆಟ್ಟು, ಖಾದರ್ ಹಾಜಿ ಸೂರ್ಯ, ಹಂಝ ಸೂರಿಕುಮೇರ್,ಹನೀಫ್ ಸಂಕ ಸೂರಿಕುಮೇರು,ಅಬ್ಬಾಸ್ ಗಡಿಯಾರ,ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸಅದಿ,ಖತೀಬರಾದ ನಝೀರ್ ಅಮ್ಜದಿ ಸರಳಿಕಟ್ಟೆ,ಹಿರಿಯ ನಾಯಕರಾದ ಸಿರಾಜುದ್ದೀನ್ ಮದನಿ ಉಸ್ತಾದ್,ಇಬ್ರಾಹಿಂ ಹಾಜಿ ಶೇರಾ,ಹಮೀದ್ ಹಾಜಿ ಪೆರ್ನೆ,ಅಬ್ದುರ್ರಶೀದ್ ಪೆರ್ನೆ, ಅಬ್ದುರ್ರಹ್ಮಾನ್ ಹಾಜಿ ಶೇರಾ ಮೊದಲಾದವರು ಉಪಸ್ಥಿತಿತರಿದ್ದರು.ಸೆಂಟರ್ ವ್ಯಾಪ್ತಿಯ ಹನ್ನೆರಡು ಬ್ರಾಂಚ್ ನ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಹೇಳಿ ದುಆಃ ಮಾಡಲಾಯಿತು.
ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಸ್ವಾಗತಿಸಿದರು, ದಅ್ವಾ ಕಾರ್ಯದರ್ಶಿ ಹನೀಫ್ ಸಖಾಫಿ ಧನ್ಯವಾದಗೈದರು, ನಿರ್ವಾಹಣಾ ಕಾರ್ಯದರ್ಶಿ ಸ್ವಾದಿಖ್ ಪೇರಮುಗೇರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಸಲೀಂ ಮಾಣಿ