janadhvani

Kannada Online News Paper

SSF ಸುಳ್ಯ ಮುತಅಲ್ಲಿಂ ದಅವಾ ಸಮಿತಿಗೆ ನೂತನ ಸಾರಥ್ಯ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ದಅವಾ ಕಾನ್ಫರನ್ಸ್ ಸೆಪ್ಟಂಬರ್ 19ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಡಿವಿಷನ್ ಅಧೀನದ ಯುನಿಟ್ ಕೇಂದ್ರಗಳ ದಅವಾ ದರ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆಯಲ್ಲಿ ಸುಳ್ಯ ಡಿವಿಷನ್ ಎಸ್ಸೆಸ್ಸೆಫ್ ಪ್ರ. ಕಾರ್ಯದರ್ಶಿ ಸಿರಾಜ್ ಹಿಮಮಿ ಕುಂಭಕ್ಕೋಡು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಸದಸ್ಯರೂ ಸುಳ್ಯ ಡಿವಿಷನ್ ಉಸ್ತುವಾರಿಯೂ ಆದ ಅಬ್ದುಲ್ ಹಮೀದ್ ಸಖಾಫಿ ಪಾಣಾಜೆ ವಿಷಯ ಮಂಡಿಸಿದರು. ಮುತಅಲ್ಲಿಂ ದಅವಾ ಸಮಿತಿಯ ವಾರ್ಷಿಕ ಕೌನ್ಸಿಲ್ ಹಾಗೂ ನೂತನ ಸಾರಥ್ಯವೂ ನೀಡಲಾಯಿತು.

ಅಧ್ಯಕ್ಷರಾಗಿ ಸಾಬಿತ್ ಎಲಿಮಲೆ ಪ್ರ. ಕಾರ್ಯದರ್ಶಿಯಾಗಿ ಅಹ್ಮದ್ ಕಬೀರ್ ಮೇನಾಲ, ಕೋಶಾಧಿಕಾರಿಯಾಗಿ ಶಮ್ಮಾಸ್ ಪೆರುವಾಜೆ, ಕಾರ್ಯದರ್ಶಿಜಳಾಗಿ ಮುಖ್ತಾರ್ ಮೇನಾಲ, ಮಶ್ಹೂದ್ ಏಣಾವರ, ನೌಶಾದ್ ಬೆಳ್ಳಾರೆ, ಹಾಫಿಳ್ ನೌಶಾದ್ ಅಡ್ಕಾರ್, ರಹೂಫ್ ಎಲಿಮಲೆ, ಇರ್ಶಾದ್ ಬೆಳ್ಳಾರೆ, ರಹೀಂ ಮಂಡೆಕೋಲು ಆಯ್ಕೆಯಾದರು. ದಅವಾ ಕನ್ವೀನರ್ ಮುನೀರ್ ಹನೀಫಿ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು.