SSF ಕುಪ್ಪೆಪದವು ಶಾಖೆ ವತಿಯಿಂದ ಧ್ವಜ ದಿನ ಕಾರ್ಯಕ್ರಮವು ದಿನಾಂಕ 19-09-2020 ಶನಿವಾರದಂದು ಶಾಖಾ ಅಧ್ಯಕ್ಷರ ಮನೆ ವಠಾರದಲ್ಲಿ ಅಧ್ಯಕ್ಷರ ನೇತೃತ್ವದಲ್ಲೇ ನಡೆಯಿತು.
ಕಾರ್ಯಕ್ರಮದಲ್ಲಿ ಅಝೀಮ್ ಮುಸ್ಲಿಯಾರ್ ಕುಪ್ಪೆಪದವುರವರು ದುಆ ಹಾಗೂ ಪ್ರಾಸ್ತಾವಿಕ ಭಾಷಣಗೈದರು. ಎಸ್,ಎಸ್,ಎಫ್ಫಿನ ಕಾರ್ಯಾಚರಣೆಯ ಅವಶ್ಯಕತೆ ಏನು ಎಂಬುವುದನ್ನು ಭಾಷಣದಲ್ಲಿ ಒತ್ತಿ ಹೇಳಿದರು.

ಮಾತ್ರವಲ್ಲದೆ ಅಶ್ರಫ್ ಅಡ್ಡೂರ್‌ರಂತಹ ನಿಷ್ಕಳಂಕ ಕಾರ್ಯಕರ್ತರನ್ನು ಉಸ್ತಾದರ ಚುಟುಕು ಮಾತುಗಳಲ್ಲಿ ಅನುಸ್ಮರಿಸಿದರು. ಕಾರ್ಯಕ್ರಮದಲ್ಲಿ ನಮ್ಮಿಂದ ಅಗಲಿದ ಉಲಮಾ ನೇತಾರರು ಹಾಗೂ ಕಾರ್ಯಕರ್ತರ ಮೇಲೆ ತಹ್ಲೀಲ್‌ಗಳನ್ನು ಹೇಳಿ ದುಆ ಮಾಡುವುದರೊಂದಿಗೆ ಶೈಖುನಾ ತಾಜುಲ್ ಪುಖಹಾಅ್ ಬೇಕಲ್ ಉಸ್ತಾದರ ಅರೋಗ್ಯ ಸುಧಾರಣೆಗಾಗಿ ಪ್ರತ್ಯೇಕ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಖಾ ಕಾರ್ಯದರ್ಶಿ A,K,ಜೀಲಾನಿ, ಉಪಾಧ್ಯಕ್ಷರಾದ ಶಬೀರ್ ಆಚರಿಜೋರ,ಜೊತೆ ಕಾರ್ಯದರ್ಶಿ ಮುಖದ್ದಿಮ್ ನೇಲಚ್ಚಿಲ್ ಹಾಗೂ ಇನ್ನಿತರ ಸಾಂಘಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ