janadhvani

Kannada Online News Paper

ಎಸ್ಎಸ್ಎಫ್ ಕಳಂಜಿಬೈಲ್ ಶಾಖೆ ವತಿಯಿಂದ ಧ್ವಜ ದಿನ ಆಚರಣೆ

ಬೆಳ್ತಂಗಡಿ :ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಎಸ್ಎಫ್) 32 ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಧ್ವಜ ದಿನದ ಅಂಗವಾಗಿ ಎಸ್ಎಸ್ಎಫ್ ಕಳಂಜಿಬೈಲ್ ಶಾಖೆ ವತಿಯಿಂದ ಇಂದು ಬೆಳಗ್ಗೆ 8:00 ಗಂಟೆಗೆ ಎಂಜೆಎಂ ವಠಾರದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯ ನಡುವೆ ವಿಜೃಂಭಣೆಯಿಂದ ಧ್ವಜ ದಿನವನ್ನು ಆಚರಿಸಲಾಯಿತು.

ಎಂಜೆಎಂ ಖತೀಬರಾದ ಬಿ.ವೈ ಅಬ್ದುಲ್ ಹಮೀದ್ ಸಅದಿ ದುಆ ನೆರವೇರಿಸಿದರು ಸ್ಥಳೀಯ ಉಸ್ತಾದರಾದಂತಹ ರಾಶಿದ್ ಮದನಿ, ಅಶ್ರಫ್ ಸಖಾಫಿ,ಜಾಬಿರ್ ಮಿಸ್ಬಾಹಿ
ಹಾಗೂ ಎಸ್ಎಸ್ಎಫ್ ಶಾಖಾ ಕಾರ್ಯದರ್ಶಿ ಜಾಬಿರ್ ಕೆ.ಪಿ, ಜಿಲ್ಲಾ ನಾಯಕರಾದ ಹಕೀಮ್ ಕೆ.ಪಿ ಹಾಗೂ ಶಾಖಾ ಕಾರ್ಯಕರ್ತರು ಭಾಗಿಯಾಗುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.