janadhvani

Kannada Online News Paper

ಕೇಂದ್ರ ಮಾಜಿ ಸಚಿವ ರಘುವಂಶ ಪ್ರಸಾದ್ ನಿಧನ

ಕೇಂದ್ರ ಸರಕಾರದ ಮಾಜಿ ಸಚಿವ ಹಾಗೂ ಆರ್ ಜೆ ಡಿ ಪಕ್ಷದ ಮಾಜಿ ನಾಯಕ ರಘುವಂಶ ಪ್ರಸಾದ್ ಸಿಂಗ್ ರವರು ಇಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯ ಕಾರಣದಿಂದ ಶುಕ್ರವಾರದಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರು ಬಿಹಾರದ ವೈಶಾಲಿ ಕ್ಷೇತ್ರದಿಂದ ಪ್ರತಿನಿಧಿಸಿದ್ದರು ಹಾಗೂ ಆರ್ ಜೆ ಡಿ ಇದರ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಇತ್ತೀಚೆಗಷ್ಟೇ ಇವರು ಆರ್ ಜೆ ಡಿ ಗೆ ರಾಜಿನಾಮೆ ನೀಡಿದ್ದರು.