janadhvani

Kannada Online News Paper

SSF ಕಲ್ಲಡ್ಕ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್ ‘ಮುತಅಲ್ಲಿಂ ಸಂಗಮ’

SSF ಕಲ್ಲಡ್ಕ ಸೆಕ್ಟರ್ ವತಿಯಿಂದ ಸೆ.6 ರಂದು ಸಂಜೆ ಮಜೀದ್ ಕದ್ಕಾರ್ ಅಧ್ಯಕ್ಷರು ಕಲ್ಲಡ್ಕ ಸೆಕ್ಟರ್ ಇವರ ಅಧ್ಯಕ್ಷತೆಯಲ್ಲಿ ದಅವಾ ಕಾನ್ಫರೆನ್ಸ್ (ಮುತಅಲ್ಲಿಂ ಸಂಗಮ ) ದಾರುಲ್ ಅಶ್ – ಅರಿಯ್ಯ ಹಾಲ್ ನಲ್ಲಿ ನಡೆಯಿತು.

ಮುಹಮ್ಮದ್ ಅಲಿ ಮದನಿ ಸೆರ್ಕಳ ಸ್ವಾಗತಿಸಿದರು ಕೆ.ಕೆ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಸಾಲೀಂ ಸಅದಿ ಅಲ್ – ಅಪ್ಳಲಿ ತರಗತಿ ಮಂಡಿಸಿದರು. ಇಬ್ರಾಹಿಂ ಸಖಾಫಿ ಸೆರ್ಕಳ ಹಾಗೂ ಮುಹಮ್ಮದಾಲಿ ಸಖಾಫಿ ಅಶ್ – ಅರಿಯ್ಯ ಆಶಂಸ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಅಕ್ಬರ್ ಅಲಿ ಮದನಿ ಅಲಂಪಾಡಿ , ಕರೀಂ ಕದ್ಕಾರ್ , ಹಂಝ ಮಂಚಿ , ಮ್ಹಸೂಫ್ ಅಬ್ದುಲ್ಲಾ , ಇರ್ಷಾದ್ ಹಾಜಿ ಗೂಡಿನ ಬಳಿ , ಅನ್ಸಾರ್ ಕಾರಜೆ ಹಾಗೂ SSF ಕಲ್ಲಡ್ಕ ಸೆಕ್ಟರ್ ಸದಸ್ಯರು ಉಪಸ್ಥಿತರಿದ್ದರು. ಸಪ್ವಾನ್ ನಾರ್ಶ ವಂದಿಸಿದರು.