ಮಂಗಳೂರು ಪಂಪ್ವೆಲ್ ನಲ್ಲಿರುವ ಪ್ರತಿಷ್ಠಿತ ಮಸ್ಜಿದ್ ತಖ್ವಾ ಮಸೀದಿಗೆ ದುಷ್ಕರ್ಮಿಗಳು ನಿನ್ನೆ ಬಾಟಲು ಎಸೆದು ಹಾನಿಗೊಳಿಸಿದ್ದು, ಕೃತ್ಯದ ಹಿಂದೆ ಜಿಲ್ಲೆಯಲ್ಲಿ ಬೃಹತ್ ಗಲಭೆ ಸೃಷ್ಟಿಸುವ ವಾಸನೆ ಬಡಿಯುತ್ತಾ ಇದೆ. ಕೋಮು ಗಲಭೆ ಸೃಷ್ಟಿಸುವ ಮುಂದುವರಿದ ಭಾಗವಾಗಿ ಜಿಲ್ಲೆಯ ಕೆಳವರ್ಗದ ಯುವಕರನ್ನು ಬಳಸಿ ಮುಸ್ಲಿಮರ ಧಾರ್ಮಿಕ ಕೇಂದ್ರಗಳಿಗೆ ಹಾನಿಗೊಳಿಸಿ, ಆ ಮೂಲಕ ಮುಸ್ಲಿಮರನ್ನು ಪ್ರಚೋದಿಸಿ,ಬೀದಿಗೆ ಇಳಿಸಿ, ಹಿಂದಿಂದ, ಅದೇ ಕೆಳವರ್ಗದ ದಲಿತ,ಬಿಲ್ಲವ ಯುವಕರಿಂದ ಕಲ್ಲು,ಹೊಡೆಯಿಸಿ,ಗಲಭೆ ಎಬ್ಬಿಸಿ,ಜಿಲ್ಲೆಯಲ್ಲಿ ಬೃಹತ್ ಕೋಮು ಗಲಭೆ ಸೃಷ್ಟಿಸಿ,ಮತೀಯ ದ್ರುವೀಕರಣಕ್ಕೆ ಪ್ರಯತ್ನಿಸುವ ಹುನ್ನಾರ ಇದಾಗಿರುತ್ತದೆ.
ದ.ಕ.ಜಿಲ್ಲೆಯ ಮುಸ್ಲಿಮರಿಗೆ ಇಂತಹ ಕುಕೃತ್ಯ ಗಳ ಬಗ್ಗೆ ತಿಳಿದಿದೆ. ಇತ್ತೀಚೆಗೆ ವಕ್ಫ್ ಭವನಕ್ಕೆ ದುಷ್ಕರ್ಮಿಗಳು ಮಾಡಿದ ಹಾನಿ ಇದೇ ಹುನ್ನಾರದ ಬಾಗವಾಗಿರುತ್ತದೆ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸುವುದು ಒಳಿತು. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.















ಇನ್ನಷ್ಟು ಸುದ್ದಿಗಳು
ಎಸ್ಡಿಪಿಐ ಹಾವೇರಿ ಜಿಲ್ಲೆ- ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಆಯ್ಕೆ
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಅಜಿಲಮೊಗರು ಹೋಗುವ ರಸ್ತೆಯಲ್ಲಿ ರಾತ್ರಿ ಕಂಡುಬಂದ ಯಮರಕ್ಕಸ,ಭಯಭೀತರಾದ ಕಾರುಚಾಲಕರು: ವೈರಲ್ ಫೇಕ್ ಹರಡಿದ ವಿಘ್ನ ಸಂತೋಷಿಗಳು
ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್- ನೂತನ ಕಟ್ಟಡ ನಾಳೆ ಉದ್ಘಾಟನೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ತಕ್ಷಣ ರಾಪಿಡ್ ಟೆಸ್ಟ್ಗೆ ಕರ್ನಾಟಕ ಮುಸ್ಲಿಂ ಜಮಾಅತ್,ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಹುಬ್ಬುಲ್ ಹಬೀಬ್ ﷺ ಆನ್ಲೈನ್ ಆತ್ಮೀಯ ಮಜ್ಲಿಸ್ ನಾಳೆಯಿಂದ ಪ್ರಾರಂಭ
ಸುಳ್ಯದಿಂದ ಮಂಗಳೂರಿಗೆ ರೈತರ ಜಾಥಾ: ಸ್ವಾಗತಿಸಲು ಸ್ವಾಗತ ಸಮಿತಿ ರಚನೆ
ಅ.29ಕ್ಕೆ ಈದ್ ಮಿಲಾದ್ ಆಚರಣೆ- ಖಾಝಿ ಖುರ್ರತುಸ್ಸಾದಾತ್ ಮತ್ತು ಝೈನುಲ್ ಉಲಮಾ ಘೋಷಣೆ
ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆ
ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆ ವಿರುದ್ಧ ಎಸ್ಡಿಪಿಐ ವ್ಯಾಪಕ ಪ್ರತಿಭಟನೆ