janadhvani

Kannada Online News Paper

ಕೇಜ್ರಿವಾಲ್‌ಗೆ ಕೊರೋನಾ ಲಕ್ಷಣ- ಸ್ವಯಂ ಕ್ವಾರಂಟೈನ್‌ಗೆ ನಿರ್ಧಾರ

ಹೊಸ ದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಕೊರೊನಾ ಸೋಂಕಿತ­ರಲ್ಲಿ ಕಂಡುಬರುವ ಅನಾರೋಗ್ಯದ ಲಕ್ಷಣಗಳು ಕಾಣಿಸಿವೆ.

ಹೀಗಾಗಿ, ಸ್ವಯಂ ಕ್ವಾರಂಟೈನ್‌ಗೆ ತೆರಳಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ.ಅವರಿಗೆ ಮಂಗಳವಾರ ಕೋವಿಡ್‌-19 ತಪಾಸಣೆಗಳು ನಡೆಯಲಿವೆ.

ಕೇಜ್ರಿವಾಲ್‌ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲಿನಲ್ಲಿ ಕೆರೆತವೂ ಉಂಟಾಗಿದೆ. ಮಧು­ಮೇಹ ರೋಗಿಯಾಗಿರುವ ಅವ­ರನ್ನು ತಕ್ಷಣದಲ್ಲೇ ಕ್ವಾರಂಟೈನ್‌ಗೆ ತೆರಳಿ, ಪರೀಕ್ಷೆ ನಡೆಸಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾಗಿ ಅಧಿಕಾರಿಗಳು ಸೂಚಿಸಿದ್ದಾರೆ.

ಭಾನುವಾರ ಬೆಳಗ್ಗೆ ಕೇಜ್ರಿವಾಲ್‌ ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಯಾವುದೇ ಸಭೆ ನಡೆಸಿರಲಿಲ್ಲ. ಕಳೆದ ಎರಡು ತಿಂಗಳಿಂದ ತಮ್ಮ ಅಧಿಕೃತ ನಿವಾಸದಲ್ಲಿಯೇ ಉಳಿದುಕೊಂಡಿದ್ದ ಕೇಜ್ರಿವಾಲ್,‌ ಅಲ್ಲಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆಗಳನ್ನು ನಡೆಸುತ್ತಿದ್ದರು.

error: Content is protected !! Not allowed copy content from janadhvani.com