ಪುತ್ತೂರು : ಎಸ್ಸೆಸ್ಸಫ್ ಕ್ಯಾಂಪಸ್ ಪುತ್ತೂರು ಸಮಿತಿ ವತಿಯಿಂದ ವಿಶ್ವ ಪರಿಸರ ದಿನವನ್ನು ಸಸಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
“ನಾಳೆಗೊಂದು ನೆರಳು” ಅನ್ನುವ ಘೋಷವಾಕ್ಯದಡಿಯಲ್ಲಿ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ವ್ಯಾಪ್ತಿಯ 47 ಯುನಿಟ್ ಗಳ ಕ್ಯಾಂಪಸ್ ಕಾರ್ಯಕರ್ತರಿಗೆ ಸಸಿ ವಿತರಿಸುವುದರ ಮೂಲಕ ವಿಶ್ವ ಪರಿಸರದ ದಿನದ ಸಂದೇಶವನ್ನು ಬಿತ್ತರಿಸಲಾಯಿತು.
ವಿಶ್ವ ಪರಿಸರ ದಿನದ ಉದ್ಘಾಟನೆಯನ್ನು ಮಾಡಿದ ಎಸ್ ವೈ ಎಸ್ ಪುತ್ತೂರು ಸೆಂಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಖಾಸಿಮಿಯವರು ಪರಿಸರವನ್ನು ಪ್ರೀತಿಸುವುದರ ಮೂಲಕ ಮನುಷ್ಯರು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ ವೈ ಎಸ್ ಜಿಲ್ಲಾ ಇಸಾಬ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಎಸ್ಸೆಸ್ಸಫ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಸ ಅದಿ,ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ,ಉಪಾಧ್ಯಕ್ಷ ಹಮೀದ್ ಸಖಾಫಿ ಪಾಣಾಜೆ, ಎಸ್ ವೈ ಎಸ್ ಪುತ್ತೂರು ಸೆಂಟರ್ ಟೀಂ ಇಸಾಬ ಅಮೀರ್ ಶಾಹುಲ್ ಹಮೀದ್ ಕಬಕ, ಡಿವಿಶನ್ ಸಮಿತಿ ಸದಸ್ಯ ಅಬೂಬಕ್ಕರ್ ಸ ಅದಿ ಪಮ್ಮಲೆ ಹಾಗೂ ಎಸ್ಸೆಸ್ಸಫ್ ಕ್ಯಾಂಪಸ್ ಕಾರ್ಯಕರ್ತರು ಉಪಸ್ಥಿತಿರಿದ್ದರು.
ಕಾರ್ಯಕ್ರಮವನ್ನು ಎಸ್ಸೆಸ್ಸಫ್ ಪುತ್ತೂರು ಕ್ಯಾಂಪಸ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಸ್ವಾಗತಿಸಿ, ಎಸ್ಸೆಸ್ಸಫ್ ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ