ನವದೆಹಲಿ: ರೆಸಿಡೆನ್ಸ್ ವಿಸಾ ಹೊಂದಿರುವವರು ಮರಳ ಬಹುದೆಂದು ಯುಎಇ ಅನುಮತಿ ನೀಡಿದೆ, ಮಾರ್ಚ್ 1 ರನಂತರ ವಿಸಾ ಅವಧಿ ಮುಗಿದವರಿಗೆ ಡಿಸಂಬರ್ ತನಕ ವಿಸ್ತರಿಸಲಾಗಿದೆ ಎಂದು ಯುಎಇ ಹೇಳಿದೆ.
ಆದರೆ, ಭಾರತದ ಹೊಸ ಸುತ್ತೋಲೆಯ ಪ್ರಕಾರ ಯುಎಇ ಗೆ ಮರಳಲು ತೊಡಕಾಗಲಿದೆ. ವಿಸಾ ಅವಧಿ ಮುಗಿದವರನ್ನು ವಿದೇಶಕ್ಕೆ ತೆರಳಲು ಅನುಮತಿಸಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿ, ಯುಎಇ ಗೆ ಮರಳಲು ಬಯಸಿರುವ ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೀಡುಮಾಡಿದೆ.
ಜೂನ್ 1ರಿಂದ ಕನಿಷ್ಟ ಮೂರು ತಿಂಗಳ ವೀಸಾ ಅವಧಿ ಇರುವವರಿಗೆ ಮಾತ್ರ ಪ್ರಯಾಣ ಅನುಮತಿ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಂಪೆನಿಗಳ ಆಫರ್ ಲೆಟರ್ ಇದ್ದರೂ,ಒಂದು ತಿಂಗಳ ವೀಸಾ ಅವಧಿ ಇರಬೇಕೆಂಬುದು ಕಡ್ಡಾಯವಾಗಿದೆ ಎಂದು ಸುತ್ತೋಲೆ ಹೇಳುತ್ತಿದೆ.
ಮಾರ್ಚ್ 1 ನಂತರ ವೀಸಾ ಕೊನೆಗೊಳ್ಳುವವರಿಗೆ ಡಿಸೆಂಬರ್ 31ರವರೆಗೆ ಯುಎಇಯಲ್ಲಿ ಇರಬಹುದು ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದರು.ಮಾರ್ಚ್ ನಲ್ಲಿ ವೀಸಾ ಅವಧಿ ಕೊನೆಗೊಂಡ ರೆಸಿಡೆಂಟ್ ವೀಸಾದವರು ಊರಿನಲ್ಲಿದ್ದರೆ ಅವರಿಗೆ ಮರಳಿ ಬರಬಹುದು ಎಂದು ತಿಳಿಸಲಾಗಿತ್ತು. ಇದರೊಂದಿಗೆ ಹಲವು ಕುಟುಂಬಗಳು ಯುಎಇಗೆ ಮರಳಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹೊಸ ವೀಸಾ ನೀಡುವುದನ್ನು ಯುಎಇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಆದರೆ, ಹಳೆ ವೀಸಾ ಇರುವವರಿಗೆ ಪ್ರವೇಶ ಅನುಮತಿ ನೀಡಿತ್ತು.
ಇದೀಗ ಭಾರತ ಸರಕಾರದ ಸುತ್ತೋಲೆಯು ಅನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸಿದೆ, ಈ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಯುಎಇಯ ಇಂಡಿಯನ್ ಕೌನ್ಸುಲ್ ಜನರಲ್ ವಿಪುಲ್ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ