janadhvani

Kannada Online News Paper

ವಿದೇಶಕ್ಕೆ ಮರಳಲು ಬಯಸುವವರಿಗೆ ಶಾಕ್- ಕೇಂದ್ರದ ಸುತ್ತೋಲೆ ತೊಡಕು

ನವದೆಹಲಿ: ರೆಸಿಡೆನ್ಸ್ ವಿಸಾ ಹೊಂದಿರುವವರು ಮರಳ ಬಹುದೆಂದು ಯುಎಇ ಅನುಮತಿ ನೀಡಿದೆ, ಮಾರ್ಚ್ 1 ರನಂತರ ವಿಸಾ ಅವಧಿ ಮುಗಿದವರಿಗೆ ಡಿಸಂಬರ್ ತನಕ ವಿಸ್ತರಿಸಲಾಗಿದೆ ಎಂದು ಯುಎಇ ಹೇಳಿದೆ.

ಆದರೆ, ಭಾರತದ ಹೊಸ ಸುತ್ತೋಲೆಯ ಪ್ರಕಾರ ಯುಎಇ ಗೆ ಮರಳಲು ತೊಡಕಾಗಲಿದೆ. ವಿಸಾ ಅವಧಿ ಮುಗಿದವರನ್ನು ವಿದೇಶಕ್ಕೆ ತೆರಳಲು ಅನುಮತಿಸಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿ, ಯುಎಇ ಗೆ ಮರಳಲು ಬಯಸಿರುವ ಅನಿವಾಸಿ ಭಾರತೀಯರನ್ನು ಸಂಕಷ್ಟಕ್ಕೀಡುಮಾಡಿದೆ.

ಜೂನ್ 1ರಿಂದ ಕನಿಷ್ಟ ಮೂರು ತಿಂಗಳ ವೀಸಾ ಅವಧಿ ಇರುವವರಿಗೆ ಮಾತ್ರ ಪ್ರಯಾಣ ಅನುಮತಿ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಂಪೆನಿಗಳ ಆಫರ್ ಲೆಟರ್ ಇದ್ದರೂ,ಒಂದು ತಿಂಗಳ ವೀಸಾ ಅವಧಿ ಇರಬೇಕೆಂಬುದು ಕಡ್ಡಾಯವಾಗಿದೆ ಎಂದು ಸುತ್ತೋಲೆ ಹೇಳುತ್ತಿದೆ.

ಮಾರ್ಚ್ 1 ನಂತರ ವೀಸಾ ಕೊನೆಗೊಳ್ಳುವವರಿಗೆ ಡಿಸೆಂಬರ್ 31ರವರೆಗೆ ಯುಎಇಯಲ್ಲಿ ಇರಬಹುದು ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದರು.ಮಾರ್ಚ್ ನಲ್ಲಿ ವೀಸಾ ಅವಧಿ ಕೊನೆಗೊಂಡ ರೆಸಿಡೆಂಟ್ ವೀಸಾದವರು ಊರಿನಲ್ಲಿದ್ದರೆ ಅವರಿಗೆ ಮರಳಿ ಬರಬಹುದು ಎಂದು ತಿಳಿಸಲಾಗಿತ್ತು. ಇದರೊಂದಿಗೆ ಹಲವು ಕುಟುಂಬಗಳು ಯುಎಇಗೆ ಮರಳಲು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಹೊಸ ವೀಸಾ ನೀಡುವುದನ್ನು ಯುಎಇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಆದರೆ, ಹಳೆ ವೀಸಾ ಇರುವವರಿಗೆ ಪ್ರವೇಶ ಅನುಮತಿ ನೀಡಿತ್ತು.

ಇದೀಗ ಭಾರತ ಸರಕಾರದ ಸುತ್ತೋಲೆಯು ಅನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸಿದೆ, ಈ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಯುಎಇಯ ಇಂಡಿಯನ್ ಕೌನ್ಸುಲ್ ಜನರಲ್ ವಿಪುಲ್ ಹೇಳಿದ್ದಾರೆ.

error: Content is protected !! Not allowed copy content from janadhvani.com