janadhvani

Kannada Online News Paper

ಜುಲೈನಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅನುಮತಿ ಸಾಧ್ಯತೆ

ಹೊಸದಿಲ್ಲಿ: 5ನೇ ಹಂತದ ಲಾಕ್‌ಡೌನ್‌ ಒಂದು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಯಾವಾಗ ಅನುಮತಿ ಸಿಗುತ್ತದೆ ಎಂಬ ಪ್ರಶ್ನೆಗೆ ಜುಲೈನಲ್ಲಿ ಉತ್ತರ ದೊರೆಯುವ ಸಾಧ್ಯತೆ ಇದೆ.

ಗೃಹ ಸಚಿವಾಲಯ ಲಾಕ್‌ಡೌನ್‌ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಇದರನ್ವಯ ಎರಡನೇ ಹಂತದಲ್ಲಿ ಅಂದರೆ 15 ದಿನಗಳಾದ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ, ಎಲ್ಲ ರಾಜ್ಯಗಳಿಂದ ಅಭಿಪ್ರಾಯಗಳ್ನು ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ವಿಮಾನ ಸಂಚಾರದ ಕುರಿತು ಈಗಲೇ ನಿರ್ಧಾರ ಸಾಧ್ಯವಿಲ್ಲ. ಆದರೆ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಸೂಕ್ತ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಮೂರನೇ ಹಂತದಲ್ಲಿ ಅಂದರೆ ಜುಲೈ 20ರ ನಂತರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಚಿತ್ರಮಂದಿರ, ಜಿಮ್‌, ಈಜುಕೊಳ, ಅಮ್ಯೂಸ್‌ಮೆಂಟ್‌ ಪಾರ್ಕ್‌, ಬಾರ್‌, ಅಸೆಂಬ್ಲಿ ಹಾಲ್‌, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ಬೃಹತ್ ಸಭೆ, ಸಮಾರಂಭಗಳ ಆರಂಭದ ಬಗ್ಗೆಯೂ ಜೂನ್‌ ತಿಂಗಳ ಮೂರನೇ ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.