janadhvani

Kannada Online News Paper

ಜೂ.1ರಿಂದ 5ನೇ ಹಂತದ ಲಾಕ್ಡೌನ್- ಜೂ.8 ಕ್ಕೆ ಧಾರ್ಮಿಕ ಕೇಂದ್ರ ತೆರೆಯಲು ಅವಕಾಶ

ನವದೆಹಲಿ: ಜೂನ್ 1ರಿಂದ 5ನೇ ಹಂತದ ಲಾಕ್ಡೌನ್ ಜಾರಿಗೆ ಬರಲಿದೆ. ಜೂನ್ 1ರಿಂದ 15ರವರೆಗೆ 2 ವಾರ ಇರಲಿರುವ 5ನೇ ಹಂತದ ಲಾಕ್ಡೌನ್ ಸ್ವರೂಪ ಸಂಪೂರ್ಣ ಭಿನ್ನವಾಗಿರಲಿದೆ.

ಈ ಬಾರಿ ದೇಶದ 13 ಮಹಾನಗರಗಳು ಸೇರಿದಂತೆ 145 ಜಿಲ್ಲೆಗಳಲ್ಲಿ ಮಾತ್ರ ಕಟ್ಟುನಿಟ್ಟಿನ‌ ಕ್ರಮ ಇರಲಿದೆ. ಉಳಿದೆಡೆ ರಾತ್ರಿ‌ 9ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ ಇರಲಿದೆ. ಮೊದಲು ರಾತ್ರಿ‌ 7ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ ಇತ್ತು. ರಾಜ್ಯಗಳ ಒತ್ತಡದ ಮೇಲೆ ಹೊಸ ಮಾರ್ಗಸೂಚಿಯಲ್ಲಿ 2 ಗಂಟೆ ಕಾಲ ವಿಸ್ತರಣೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.

5ನೇ ಹಂತದ ಲಾಕ್ಡೌನ್ ವೇಳೆ ಕಟ್ಟುನಿಟ್ಟಿನ‌ ಕ್ರಮ ಇರಲಿರುವ 13 ನಗರಗಳೆಂದರೆ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋದ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರು. ಇದರಿಂದಾಗಿ ದೇಶದ ಮೆಟ್ರೋ ಸಿಟಿಗಳಲ್ಲಿ ಒಂದಾದ ರಾಜ್ಯ ರಾಜಧಾನಿ ಬೆಂಗಳೂರು ಬಚಾವಾದಂತಾಗಿದೆ.

ಇದಲ್ಲದೆ 145 ಜಿಲ್ಲೆಗಳ‌ ಪೈಕಿ ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರಿರುವ ಮಂಡ್ಯ, ಕಲ್ಬುರ್ಗಿ ಮತ್ತು ಯಾದಗಿರಿ ಸ್ಥಾನ ಪಡೆಯುವ ಸಂಭವ ಇದೆ.

5ನೇ ಹಂತದ ಲಾಕ್ಡೌನ್ ಸ್ವರೂಪ ಹೇಗಿರಲಿದೆ?

  • ಎಲ್ಲೆಡೆ ಅಂಗಡಿ ಮುಂಗಟ್ಟು ತೆರೆಯಬಹುದು
  • ಎಲ್ಲಾ ರೀತಿಯ ಕೈಗಾರಿಕಾ, ಉತ್ಪಾದನಾ ಚಟುವಟಿಕೆ ಮಾಡಬಹುದು
  • ಎಲ್ಲಾ ರೀತಿಯ ಕಚೇರಿಗಳೂ ಕೆಲಸ ಆರಂಭಿಸಬಹುದು. ಆದರೆ ವರ್ಕ್ ಫ್ರಂ ಹೋಂ ಅವಕಾಶ ಇದ್ದರೆ ಅದನ್ನೇ ಮಾಡಬೇಕು
  • ಕ್ಷೌರಿಕದ ಅಂಗಡಿ, ಬ್ಯೂಟಿ ಪಾರ್ಲರ್ ತೆರೆಯಬಹುದು
  • ಮದ್ಯದ ಅಂಗಡಿ ತೆರೆಯುವುದುಕ್ಕೂ ಗ್ರೀನ್ ಸಿಗ್ನಲ್
  • ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಸಿಗುವ ಸಾಧ್ಯತೆ
  • ಹೋಟೆಲ್ಗಳಲ್ಲಿ ಅಲ್ಲೇ ತಿನ್ನುವುದರ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಬೇಕಾಗಬಹುದು
  • ರೆಸ್ಟೋರೆಂಟ್ ಗಳಲ್ಲೂ ಅಲ್ಲೇ ತಿನ್ನುವುದರ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಬೇಕಾಗಬಹುದು
  • ಕಂಟೋನ್ಮೆಂಟ್ ‌ಜೋನ್ ಇದ್ದರೆ ಅವಕಾಶ ಇರುವುದಿಲ್ಲ
  • ಮಾಲ್ಗಳು ಅತಿಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು
  • ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಲಿದೆ
  • ಸಾಮಾಜಿಕ ಅಂತರ ನಿರ್ವಹಣೆ ಮಾಲ್ ಗಳ ಜವಾಬ್ದಾರಿಯಾಗಿರುತ್ತದೆ
  • ಅಗತ್ಯ ಇದ್ದಲ್ಲಿ ಸ್ಯಾನಿಟೈಸೇಷನ್ ವ್ಯವಸ್ಥೆ ‌ಇರಬೇಕು
  • ಲಿಫ್ಟ್, ಎಲಿವೇಟರ್ ಗಳನ್ನು ಕಡಿಮೆ ಬಳಸಬೇಕು
  • ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಿಗೆ ಮಾತ್ರ ರೆಡ್ ಸಿಗ್ನಲ್ ಸಾಧ್ಯತೆ ಇದೆ
  • ಸಾರ್ವಜನಿಕ ಸಾರಿಗೆ ಆರಂಭಿಸುವುದಕ್ಕೂ ಅವಕಾಶ ಸಿಗಬಹುದು
  • ಬಸ್, ಆಟೋ, ಟ್ಯಾಕ್ಸಿ, ಸೈಕಲ್ ರಿಕ್ಷಾಗಳಿಗೆ ಅವಕಾಶ ಸಿಗಲಿದೆ
  • ಮೆಟ್ರೋ, ರೈಲು, ವಿಮಾನಗಳು ಮಾತ್ರ ಹಂತಹಂತವಾಗಿ ಆರಂಭಿಸಬಹುದು
  • ಸಾಮಾಜಿಕ ಅಂತರ ಕಾಪಾಡುವುದು ಎಲ್ಲೆಡೆ ಕಡ್ಡಾಯವಾಗಿರಲಿದೆ
  • ದೇವಸ್ಥಾನ, ಮಸೀದಿ, ಚರ್ಚ್ ತೆರೆಯುವುದಕ್ಕೂ ಅವಕಾಶ ಸಿಗಲಿದೆ. ಆದರೆ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ನಿಯಮ ಇರಲಿದೆ
  • ಮದುವೆ ಮಾಡಲು ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ. ಜಿಲ್ಲಾಧಿಕಾರಿ ಹೇಳಿದಷ್ಟೇ ಜನ‌ ಸೇರಿ ಮದುವೆ ಮಾಡಬೇಕಾಗುತ್ತದೆ
  • ವಾಕಿಂಗ್ ಮತ್ತು ಜಾಗಿಂಗ್ ಗಾಗಿ ಉದ್ಯಾನವನಗಳನ್ನು ತೆರೆಯಬಹುದು
  • ಜಿಮ್ಗಳನ್ನು ತೆರೆಯಬಹುದು, ಆದರೆ ಒಳಗಡೆ ಸ್ಯಾನಿಟೈಸೇಷನ್ ವ್ಯವಸ್ಥೆ ಇರಬೇಕು
  • ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳನ್ನು ತೆರೆಯಬಹುದು. ಕೆಲವೇ ಕೆಲವು ಜನರಿಗೆ ಮಾತ್ರ ಅವಕಾಶ ನೀಡಬೇಕು. ಆದರೆ ಯಾವುದೇ ಸ್ಪರ್ಧೆ, ಕ್ರೀಡಾಕೂಟ ಆಯೋಜಿಸುವಂತಿಲ್ಲ
  • ಶಾಲಾ-ಕಾಲೇಜು, ಟುಟೋರಿಯಲ್ಸ್ ಗಳನ್ನು ಆರಂಭ ಮಾಡುವಂತಿಲ್ಲ. ಆದರೆ ಆನ್ ಲೈನ್ ಕ್ಲಾಸ್ ನಡೆಸಬಹುದು

error: Content is protected !! Not allowed copy content from janadhvani.com