ದುಬೈ:ರಜಾ ಅವದಿಯಲ್ಲಿ ಊರಿಗೆ ತೆರಳಿದ ಯುಎಇ ನಿವಾಸ ವಿಸಾ ಹೊಂದಿರುವ ಅನಿವಾಸಿಯರಿಗೆ ಮರಳಲು ಅನುಮತಿ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಹಿಂದಿರುಗಲು ಸಾಧ್ಯವಾಗಲಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮರಳಲು ಬಯಸುವವರು ಐಡೆಂಟಿಟಿ ಮತ್ತು ಸಿಟಿಝನ್ಶಿಪ್ ಸಚಿವಾಲಯದ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಕುಟುಂಬ ಸದಸ್ಯರು ಯುಎಇಯಲ್ಲಿರುವವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಐಡೆಂಟಿಟಿ ಮತ್ತು ಸಿಟಿಝನ್ಶಿಪ್ ಗಾಗಿ ಯುಎಇ ಫೆಡರಲ್ ಪ್ರಾಧಿಕಾರದ ಅಧೀನದ www.smartservices.ica.gov.ae ವೆಬ್ಸೈಟ್ನಲ್ಲಿ ಹೆಸರನ್ನು ನೋಂದಾಯಿಸಬೇಕು. ಸಾರ್ವಜನಿಕ ಸೇವಾ ವಿಭಾಗದಲ್ಲಿ, OTHER SERVICES -RESIDENTS OUTSIDE UAE – ENTRY PERMISSION – ISSUE ಎಂಬ ಲಿಂಕ್ನಲ್ಲಿ ಕ್ಲಿಕ್ ಮಾಡಿ. ನಂತರ ಎಮಿರೇಟ್ಸ್ ಐಡಿ, ಫೋನ್ ಸಂಖ್ಯೆಯಂತಹ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.
ವಿದೇಶಾಂಗ ಅಂತರ್ರಾಷ್ಟ್ರೀಯ ಸಹಕಾರ, ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಶಿಫ್ ಸಚಿವಾಲಯಗಳು, ಮರಳಲು ಆಸಕ್ತಿ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಲಿದೆ. ವೈದ್ಯರು, ದಾದಿಯರು ಮುಂತಾದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಿಶೇಷ ವಿಮಾನದಲ್ಲಿ ವಲಸಿಗರನ್ನು ಮರಳಿ ಕರೆತರಲಾಗುವುದು ಎಂದು ತಿಳಿದುಬಂದಿದೆ. ಈ ನಿರ್ಧಾರ ಯುಎಇಯಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರಿಗೆ ಸಮಾಧಾನಕರವಾಗಿದೆ. ಕಳೆದ ವಾರ ವಿಶೇಷ ವಿಮಾನದಲ್ಲಿ ವಲಸಿಗರನ್ನು ತಿರುವನಂತಪುರಂನಿಂದ ಬಹರೈನ್ಗೆ ಕರೆತರಲಾಗಿತ್ತು. ಇತರ ಕೊಲ್ಲಿ ರಾಷ್ಟ್ರಗಳು ಸಹ ವಲಸಿಗರನ್ನು ವಾಪಸಾಗಿಸಲು ಅವಕಾಶ ಕಲ್ಪಿಸುವುದಾಗಿ ತಿಳಿದು ಬಂದಿದೆ.
ಮಾರ್ಚ್ 1 ರ ನಂತರ ವೀಸಾ ಅವಧಿ ಮುಗಿದವರಿಗೆ ಡಿಸೆಂಬರ್ 31 ರವರೆಗೆ ಕಾಲಾವಧಿ ವಿಸ್ತರಿಸಿ ನೀಡಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು