ಯುಎಇ ವಿಸಾ ಹೊಂದಿರುವವರಿಗೆ ಮರಳಲು ವಿಶೇಷ ವಿಮಾನ- ನೋಂದಣೆ ಆರಂಭ

ದುಬೈ:ರಜಾ ಅವದಿಯಲ್ಲಿ ಊರಿಗೆ ತೆರಳಿದ ಯುಎಇ ನಿವಾಸ ವಿಸಾ ಹೊಂದಿರುವ ಅನಿವಾಸಿಯರಿಗೆ ಮರಳಲು ಅನುಮತಿ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಹಿಂದಿರುಗಲು ಸಾಧ್ಯವಾಗಲಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮರಳಲು ಬಯಸುವವರು ಐಡೆಂಟಿಟಿ ಮತ್ತು ಸಿಟಿಝನ್ಶಿಪ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಕುಟುಂಬ ಸದಸ್ಯರು ಯುಎಇಯಲ್ಲಿರುವವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಐಡೆಂಟಿಟಿ ಮತ್ತು ಸಿಟಿಝನ್ಶಿಪ್ ಗಾಗಿ ಯುಎಇ ಫೆಡರಲ್ ಪ್ರಾಧಿಕಾರದ ಅಧೀನದ www.smartservices.ica.gov.ae ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಾಯಿಸಬೇಕು. ಸಾರ್ವಜನಿಕ ಸೇವಾ ವಿಭಾಗದಲ್ಲಿ, OTHER SERVICES -RESIDENTS OUTSIDE UAE – ENTRY PERMISSION – ISSUE ಎಂಬ ಲಿಂಕ್‌ನಲ್ಲಿ ಕ್ಲಿಕ್ ಮಾಡಿ. ನಂತರ ಎಮಿರೇಟ್ಸ್ ಐಡಿ, ಫೋನ್ ಸಂಖ್ಯೆಯಂತಹ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ವಿದೇಶಾಂಗ ಅಂತರ್‌ರಾಷ್ಟ್ರೀಯ ಸಹಕಾರ, ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಶಿಫ್ ಸಚಿವಾಲಯಗಳು, ಮರಳಲು ಆಸಕ್ತಿ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಲಿದೆ. ವೈದ್ಯರು, ದಾದಿಯರು ಮುಂತಾದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಿಶೇಷ ವಿಮಾನದಲ್ಲಿ ವಲಸಿಗರನ್ನು ಮರಳಿ ಕರೆತರಲಾಗುವುದು ಎಂದು ತಿಳಿದುಬಂದಿದೆ. ಈ ನಿರ್ಧಾರ ಯುಎಇಯಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರಿಗೆ ಸಮಾಧಾನಕರವಾಗಿದೆ. ಕಳೆದ ವಾರ ವಿಶೇಷ ವಿಮಾನದಲ್ಲಿ ವಲಸಿಗರನ್ನು ತಿರುವನಂತಪುರಂನಿಂದ ಬಹರೈನ್‌ಗೆ ಕರೆತರಲಾಗಿತ್ತು. ಇತರ ಕೊಲ್ಲಿ ರಾಷ್ಟ್ರಗಳು ಸಹ ವಲಸಿಗರನ್ನು ವಾಪಸಾಗಿಸಲು ಅವಕಾಶ ಕಲ್ಪಿಸುವುದಾಗಿ ತಿಳಿದು ಬಂದಿದೆ.

ಮಾರ್ಚ್ 1 ರ ನಂತರ ವೀಸಾ ಅವಧಿ ಮುಗಿದವರಿಗೆ ಡಿಸೆಂಬರ್ 31 ರವರೆಗೆ ಕಾಲಾವಧಿ ವಿಸ್ತರಿಸಿ ನೀಡಲಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!