ರಿಯಾದ್: ರಂಝಾನ್ನಲ್ಲಿ ಕರ್ಫ್ಯೂ ಸಡಿಲಿಕೆ ಸಮಯವನ್ನು ಗೃಹ ಸಚಿವಾಲಯವು ಬದಲಾಯಿಸಿದೆ. ರಂಝಾನ್ ಉಪವಾಸ ಆರಂಭ ಗೊಂಡ ದಿನದಿಂದ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗಿನ ಏಕೈಕ ಸಮಯ ಮಾತ್ರ ಮನೆಯಿಂದ ಹೊರಬರಲು ಅವಕಾಶ.
ಪ್ರಮುಖ ಆದೇಶಗಳು ಇಲ್ಲಿವೆ.
1. ದೇಶದ ಎಲ್ಲಾ ಪ್ರದೇಶಗಳಲ್ಲೂ ರಂಝಾನ್ನಲ್ಲಿ ಹೊರಬರುವ ಸಮಯವೆಂದರೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ.
ಪ್ರಸ್ತುತ ಮಧ್ಯಾಹ್ನ 3 ಗಂಟೆಗೆ ಕರ್ಫ್ಯೂ ಇರುವ ಸ್ಥಳಗಳಲ್ಲಿ ಸಂಜೆ 5ರಿಂದ ಬೆಳಿಗ್ಗೆ 9ರವರೆಗೆ ಕರ್ಫ್ಯೂ ಮುಂದುವರಿಯಲಿದೆ. ಅಂದರೆ 24 ಗಂಟೆಗಳ ಕರ್ಫ್ಯೂ ಇಲ್ಲದ ಸ್ಥಳಗಳಲ್ಲಿ, ರಂಝಾನ್ ಸಮಯದಲ್ಲಿ ಕರ್ಫ್ಯೂ ಸಮಯ ಸಂಜೆ 5 ರಿಂದ ಬೆಳಿಗ್ಗೆ 9 ರವರೆಗೆ ಇರುತ್ತದೆ.
2. ಪ್ರಸ್ತುತ 24 ಗಂಟೆಗಳ ಕರ್ಫ್ಯೂ ಇರುವ ಸ್ಥಳಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಸಡಿಲಿಕೆ ಜಾರಿಯಲ್ಲಿದೆ ಆದರೆ ರಮಳಾನ್ ನಲ್ಲಿ ಹೊರಬರಲು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವ ಸಮಯವನ್ನು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಸಮೀಪದ ಅಂಗಡಿಗಳಿಂದ ಸರಕುಗಳನ್ನು ಖರೀದಿಸಬಹುದು.
3. ಈ ಹಿಂದೆ,ಮಕ್ಕಾ, ಮದೀನಾ,ಜಿದ್ದಾ ಮತ್ತು ದಮ್ಮಾಮ್ ನ ನಿರ್ದಿಷ್ಟ ಪ್ರದೇಶಗಳಲ್ಲಿನ ಜನರನ್ನು ಕ್ವಾರಂಟೈನ್ನಲ್ಲಿ ಪೂರ್ಣ ಸಮಯ ಉಳಿಯುವಂತೆ ಕೇಳಲಾಗಿತ್ತು. ಅಲ್ಲಿ ಯಾವುದೇ ರಿಯಾಯಿತಿ ಇಲ್ಲ , ಪೂರ್ಣವಾಗಿ ಲಾಕ್ ಡೌನ್ ಮುಂದುವರಿಯಲಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ