ದುಬೈ: ಪವಿತ್ರ ರಮಝಾನ್ನಲ್ಲಿ ಒಂದು ಕೋಟಿ ಜನರಿಗೆ ಆಹಾರವನ್ನು ಒದಗಿಸುವ ಯೋಜನೆಯನ್ನು ಪ್ರಕಟಿಸಿದೆ. ‘ಟೆನ್ ಮಿಲಿಯನ್ ಮೀಲ್ಸ್ ‘ ಎಂಬ ಶೀರ್ಷಿಕೆಯ ಯೋಜನೆಯನ್ನು ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಷಿದ್ ಆಲ್ ಮಕ್ತೂಂ ಘೋಷಿಸಿದ್ದಾರೆ.
ಶೈಖ ಹಿಂದ್ ಬಿಂತ್ ಮಕ್ತೂಮ್ ಈ ಯೋಜನೆಯ ಉಸ್ತುವಾರಿ ವಹಿಸಲಿದ್ದು, ವ್ಯಕ್ತಿಗಳು ಅಥವಾ ಕುಟುಂಬಗಳೇ ಆಗಿರಲಿ, ಅಗತ್ಯವಿರುವವರಿಗೆ ಒಂದು ಕೋಟಿ ಆಹಾರ ಪೊಟ್ಟಣಗಳನ್ನು ತಲುಪಿಸುವ ಯೋಜನೆಯನ್ನು ನೋಡಿಕೊಳ್ಳಲಿದ್ದಾರೆ. ಜಗತ್ತು ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ರಮಝಾನ್ ಸಮಯದಲ್ಲಿ ಆಹಾರವನ್ನು ಪೂರೈಸುವುದು ಅತ್ಯಂತ ಮಾನವೀಯ ಕಾರ್ಯವಾಗಿದ್ದು, ಆ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಹೇಳಿದರು.
ದೇಶದಲ್ಲಿ ಯಾರೂ ಹಸಿವಿನಿಂದ ಇರಲಾರರು. ಯಾರೂ ಸಹಾಯಕರಿಲ್ಲದೆ ಒಬ್ಬನೇಯೊಬ್ಬ ರೋಗಿಯೋ, ಮುಗ್ದರೋ,ಅಸಹಾಯಕರೋ ದೇಶದಲ್ಲಿ ಹಸಿವಿನಿಂದ ಇರಬಾರದು. ಈ ಧ್ಯೇಯ ಮತ್ತು ಜವಾಬ್ದಾರಿ ದೇಶದ ಧ್ವನಿಯಾಗಿರಬೇಕು ಎಂದು ಶೈಖ್ ಮುಹಮ್ಮದ್ ಹೇಳಿದರು.
ಯುಎಇಯ ಟೆಲಿಕಾಂ ಕಂಪೆನಿಗಳು ಎಸ್ಎಂಎಸ್ ಮೂಲಕ ಊಟವನ್ನು ಪ್ರಾಯೋಜಿಸುವ ಯೋಜನೆಯನ್ನು ಕೂಡ ಪ್ರಾರಂಭಿಸಿವೆ. ಈ ಯೋಜನೆಯನ್ನು ದೇಶವು ಕಂಡ ಅತಿದೊಡ್ಡ ಸಾಮಾಜಿಕ ಉದ್ಯಮಗಳಲ್ಲಿ ಒಂದಾಗಿ ರೂಪಾಂತರಗೊಳಿಸಲು ದೇಶವು ಸಿದ್ಧತೆ ನಡೆಸುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ