ಕೋವಿಡ್-19 ಮಹಾಮಾರಿಯಿಂದ ಭಾರತ ದೇಶ ಸಂಪೂರ್ಣವಾಗಿ ಲಾಕ್‌ಡೌನ ಆಗಿರುವ, ಈ ಸಂದರ್ಭದಲ್ಲಿ ದಅವಾ ವಿಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಆನ್‌ಲೈನ್‌ನಲ್ಲಿ ವಿನೂತನ ಪ್ರಯೋಗದೊಂದಿಗೆ ತನಾಫುಸ್ 2020 ಎಂಬ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿತು. ಲಾಕ್‌ಡೌನ್ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಬೇರೆ ಕಡೆಗೆ ವ್ಯಯ ಮಾಡಿ ವ್ಯರ್ಥ ಮಾಡುವುದನ್ನು ಇದರಿಂದ ತಡೆಯಲು ಸಾಧ್ಯವಾಯಿತು.
ರಾಜ್ಯಾಧ್ಯಕ್ಷರಾದ ಅಸ್ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಾಅತ್, ಕನ್ನಡ ಭಾಷಣ, ಉರ್ದು ಭಾಷಣ ಮತ್ತು ಕನ್ನಡ ಪ್ರೌಢ ಪ್ರಬಂಧ ಸ್ಪರ್ಧೆಗಳು ನಡೆಯಿತು.. ರಾಜ್ಯ ದಅವಾ ವಿಭಾಗದ ಮೇಲ್ನೋಟದಲ್ಲಿ ನಡೆದ ಸ್ಪರ್ಧೆಗಳನ್ನು ರಾಜ್ಯ ದಅವಾ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ಮುಬಶ್ಶಿರ್ ಅಹ್ಸನಿ, ಆರಿಫ್ ಸಿ.ಅದಿ ಮೇಲ್ನೋಟ ವಹಿಸಿದ್ದರು. ಸ್ಪರ್ಧಾ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಮೀಡಿಯಾ ವಿಂಗ್‌ನ ಹಕೀಮ್ ಬೆಂಗಳೂರು, ರವೂಫ್ ಮೂಡುಗೋಪಾಡಿ, ಶರೀಫ್ ಕೊಡಗು ಹಾಗೂ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ನಿರ್ವಹಿಸಿದರು.
ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಅಸ್ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು, ಅಸ್ಸಯ್ಯದ್ ಹಾಮೀಮ್ ತಂಙಳ್ ದುಆಃದೊಂದಿಗೆ ಚಾಲನೆ ನೀಡಿದರು, ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿದರು, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಸಖಾಫಿ ಉದ್ಘಾಟಿಸಿದರು, ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ|| ಮುಹಮ್ಮದ್ ಫಾರೂಖ್ ನಈಮಿ, ಕೊಲ್ಲಂ ಫಲಿತಾಂಶ ಪ್ರಕಟ ಮಾಡಿದರು. ಮುಖ್ಯ ತೀರ್ಪುಗಾರರಾಗಿದ್ದ ಜಿ.ಎಮ್ ಮುಹಮ್ಮದ್ ಸಖಾಫಿ ಸ್ಪರ್ಧೆಯ ಕುರಿತು ಅವಲೋಕನ ಭಾಷಣ ಮಾಡಿದರು, ಕೊನೆಯಲ್ಲಿ ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಸಮಾರೋಪ ದುಆಃ ಮತ್ತು ಆಶಿರ್ವಚನ ನೆರವೇರಿಸಿದರು. ಇಸ್ಮಾಯಿಲ್ ಸಖಾಫಿ, ಕೆ.ಎಮ್ ಅಬೂಬಕ್ಕರ್ ಸಿದ್ದೀಕ್, ಹಾಫಿಝ್ ಸುಫೀಯಾನ್ ಸಖಾಫಿ ಸಂದೇಶ ಭಾಷಣ ಮಾಡಿದರು. ಅಶ್ರಫ್ ರಝಾ ಅಮ್ಜದಿ ಕಾರ್ಯಕ್ರಮವನ್ನು,ಕೊನೆಗೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ