ದೋಹಾ: ಕೋವಿಡ್ ಹರಡುವಿಕೆಯನ್ನು ತಡೆಯುವ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಸಂಪೂರ್ಣ ನಿರ್ಬಂಧಗಳನ್ನು ವಿಧಿಸಲಾದ ಖತರ್‌ನಲ್ಲಿ ಮೊದಲ ದಿನವಾದ ರವಿವಾರ ಬೀದಿಗಳೆಲ್ಲವೂ ಜನ ಸಂಚಾರವಿಲ್ಲದೆ ನಿಶ್ಚಲವಾಗಿತ್ತು. ಕಡಲತೀರಗಳು, ಉದ್ಯಾನವನಗಳು ಮತ್ತು ಕಾರ್ನಿಷ್ ಎಲ್ಲವೂ ಮುಚ್ಚಲ್ಪಟ್ಟವು. ದೋಹಾದ ಹೆಚ್ಚಿನ ಶಾಪಿಂಗ್ ಕೇಂದ್ರಗಳನ್ನು ಮುಚ್ಚಲಾಯಿತು.
ಜನರಿಗೆ ಎಲ್ಲಾ ರೀತಿಯ ವಸ್ತುಗಳು ಲಭ್ಯವಿರುವ ಸೂಖ್ ಹರಾಜ್‌ನಲ್ಲಿ ರವಿವಾರ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಯಾವುದೇ ವೈರಸ್ ಪ್ರವೇಶಿಸುವುದಿಲ್ಲ ಎಂಬ ಆಶಯದೊಂದಿಗೆ ಎಲ್ಲಾ ಮೂರು ಮಾರ್ಗಗಳಲ್ಲಿನ ಗೇಟ್‌ಗಳು ಮುಚ್ಚಲ್ಪಟ್ಟವು. ಕೆಲವು ಗಂಟೆಗಳ ಕಾಲ ಬ್ಲಾಕ್‌ನಲ್ಲಿ ಇರಬೇಕಾಗುತ್ತಿದ್ದ ದೋಹಾದಲ್ಲಿನ ಸಿಗ್ನೆಲ್‌ಗಳು ಕೆಂಪು ಮತ್ತು ಹಸಿರು ಬಣ್ಣವನ್ನು ಯಾಕೋ ಹೊತ್ತಿಸುತ್ತಿದ್ದವು.
ಕೆಲವು ವಿದೇಶಿಯರು ಅನಿರೀಕ್ಷಿತವಾಗಿ ಮಾತ್ರ ನಿರ್ಜನ ರಸ್ತೆಗಳಲ್ಲಿ ನಡೆದಾಡಿದ್ದಾರೆ. ಸದಾ ಜನರಿಂದ ತುಂಬಿತುಲುಕುತಿದ್ದ ಸೂಖ್ ವಾಕಿಫ್‌ನ ಬೀದಿಗಳಲ್ಲಿ ಪಾರಿವಾಳಗಳು ಕೂಡ ಕಂಡು ಬಂದಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗಾಗಿದೆ ಎಂದು ಹಲವರು ಹೇಳಿಕೊಂಡರು.
ಜೀವನದಲ್ಲೇ ಮೊದಲಬಾರಿಗೆ ಸೂಖ್ ಅಲ್ ಫಲಾಹ್ ಮತ್ತು ಸುಖ್ ಅಲ್ ಜಾಬರ್‌ನಲ್ಲಿ ರಸ್ತೆಬದಿಯಲ್ಲಿ ಉಚಿತ ಪಾರ್ಕಿಂಗ್ ಸ್ಥಳಗಳನ್ನು ನೋಡದ ಹಲವರಿಗೆ ಅಚ್ಚರಿ ಉಂಟಾಯಿತು.
ಫಿಲಿಪೈನ್ಸ್‌ನ ಕೇಂದ್ರ ಬಿಂದುವಾಗಿರುವ ಕಬಾಯೆನ್ ಕೇಂದ್ರದ ಮುಂದೆ ಒಬ್ಬನೇ ಒಬ್ಬ ಫಿಲಿಪೈನ್ಸ್ ವ್ಯಕ್ತಿ ಕಂಡುಬಂದಿಲ್ಲ. ಕಾರ್ನಿಷ್ ಕೂಡ ಖಾಲಿಯಾಗಿತ್ತು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ