ರಿಯಾದ್: ಅಪಾಯಕಾರಿ ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಸೌದಿ ಅರೇಬಿಯಾ ಇಂದಿನಿಂದ ಕರ್ಫ್ಯೂ ಹೇರಿದೆ. ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಸೌದಿ ಅರೇಬಿಯಾ ಈ ಆದೇಶ ಹೊರಡಿಸಿದೆ.
ಸೌದಿ ರಾಜ ಸಲ್ಮಾನ್ 21 ದಿನಗಳ ಕರ್ಫ್ಯೂಗೆ ಆದೇಶ ನೀಡಿದ್ದು, ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಸೋಮವಾರ ಸಂಜೆಯಿಂದ ಇದು ಜಾರಿಗೆ ಬರಲಿದೆ.ಮುಂದಿನ 21 ದಿನಗಳ ಕಾಲ ಪ್ರತಿದಿನ ರಾತ್ರಿ7 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಭಾನುವಾರ ಸೌದಿಯಲ್ಲಿ 119 ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಈಗ 511ಕ್ಕೇರಿದೆ. ಆಹಾರ, ಆರೋಗ್ಯ, ಮಾಧ್ಯಮ, ಸರಕು ಸಾಗಣೆ ವಾಹನಗಳು, ಇ-ಕಾಮರ್ಸ್, ಹೋಟೆಲ್ಗಳು, ಫರ್ನಿಶ್ಡ್ ಅಪಾರ್ಟ್ಮೆಂಟ್ಗಳು, ಇಂಧನ ಕ್ಷೇತ್ರ, ವಿತ್ತೀಯ ಕ್ಷೇತ್ರ, ಟೆಲಿಕಾಂ ಹಾಗೂ ಜಲಪೂರೈಕೆ ವ್ಯವಸ್ಥೆಗೆ ಈ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದೆ. ಕರ್ಫ್ಯೂ ಅವಧಿಯ ವೇಳೆ ರಸ್ತೆಗಳಲ್ಲಿ ಸುರಕ್ಷಾ ಪಡೆಗಳು, ಆ್ಯಂಬುಲೆನ್ಸುಗಳು, ಸರಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಮಸೀದಿಯಲ್ಲಿ ಪ್ರಾರ್ಥನೆ ಕರೆ ನೀಡಲು ಧಾರ್ಮಿಕ ಗುರುಗಳಿಗೆ ಮಸೀದಿಗಳಿಗೆ ತೆರಳಲು ಅನುಮತಿಯಿದೆ.
ಯುಎಇ: ಯಎಇ ಯಲ್ಲಿ ಎಲ್ಲಾ ಪ್ರಯಾಣಿಕರ ವಿಮಾನಗಳನ್ನು ತಡೆಹಿಡಿಯಲಾಗಿದೆ. ಕೋವಿಡ್-19 ಸೋಂಕು ಉಲ್ಬಣಿಸದಂತೆ ಎರಡು ವಾರಗಳ ಕಾಲ ದೇಶದಿಂದ ಹೊರಡುವ ಮತ್ತು ಬರುವ ಎಲ್ಲಾ ಪ್ರಯಾಣಿಕರ ವಿಮಾನಗಳನ್ನು ರದ್ದು ಮಾಡಲಾಗಿದೆ. ಕಾರ್ಗೋ ಸೇವೆಗಳು ಮತ್ತೆ ಮುಂದುವರಿಯಲಿದೆ.
ಔಷಧ ಮಳಿಗೆಗಳು, ಸೂಪರ್ ಮಾರ್ಕೆಟ್ ಗಳು, ಮೀನು- ಮಾಂಸದಂಗಡಿಗಳು ಹೊರತುಪಡಿಸಿ ಎಲ್ಲಾ ಮಳಿಗೆಗಳನ್ನು ಮುಚ್ಚಲು ಯುಎಇ ಆದೇಶಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ