ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಜಯನಗರ ಡಿವಿಷನ್‌ನ ವಾರ್ಷಿಕ ಮಹಾಸಭೆಯು ಬಿಸ್ಮಿಲ್ಲಾ ನಗರ್ ಮುನವ್ವರ ಮಸ್ಜಿದ್ ನಲ್ಲಿ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ನಈಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯದ್ ಸಫ್ವಾನ್ ತಂಗಳ್ ದುವಾದೊಂದಿಗೆ ಸಭೆಗೆ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಅಝ್‌ಹರಿ ಉಸ್ತಾದರು ಪ್ರಸ್ತುತ ಭಾರತದ ಸ್ಥಿತಿ ಗತಿ ಮತ್ತು ಸಂಘಟನಾ ಚಟುವಟಿಕೆಗಳ ಅನಿವಾರ್ಯತೆಯನ್ನು ವಿವರಿಸಿ ಉದ್ಘಾಟನೆಯನ್ನು ಮಾಡಿದರು.
ಪ್ರ.ಕಾರ್ಯದರ್ಶಿ ಶರೀಫ್ ಮಡಿವಾಳ ರವರು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ನಜೀಬ್ ಕೋರಮಂಗಳರವರು ವಾರ್ಷಿಕ ಆಯವ್ಯಯವನ್ನು ಮಂಡಿಸಿದರು. ಜಿಲ್ಲೆಯಿಂದ ನಿರೀಕ್ಷಕರಾಗಿ ಆಗಮಿಸಿದ್ದ ನುಫೈಲ್ ರವರು ಕೌನ್ಸಿಲ್ ಗೆ ನೇತೃತ್ವ ನೀಡಿ ತರಗತಿ ನಡೆಸಿ ಕೊಟ್ಟರು.ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಈಮಿ,ಪ್ರ.ಕಾರ್ಯದರ್ಶಿ ಯಾಗಿ ಶರೀಫ್ ಮಡಿವಾಳ,ಕೋಶಾಧಿಕಾರಿಯಾಗಿ ನಜೀಬ್ ಕೋರಮಂಗಳ,ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಅಲ್ತಾಫ್ ರವರನ್ನು ಪುನರಾಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ರಾಗಿ ಜಮಾಲುದ್ದೀನ್ ಸಖಾಫಿ ಮತ್ತು ಸಿದ್ದೀಕ್ ಸಖಾಫಿ,ಕಾರ್ಯದರ್ಶಿಗಳಾಗಿ ಹೈದರ್ ಎಸ್.ಜಿ ಪಾಲ್ಯ ಮತ್ತು ಸಂಶುದ್ದೀನ್ ಜೆ.ಪಿ.ನಗರ ಹಾಗೂ ಹದಿನೆಂಟು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.ಇಶಾರ ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ಸೇರಿಸಿದ ಜೆ.ಪಿ.ನಗರ ಶಾಖೆಗೆ ಕಾಣಿಕೆ ಯನ್ನು ನೀಡಲಾಯಿತು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ