ನವದೆಹಲಿ, ಜ.27: ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ (ಎಐ) ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಏರ್ ಇಂಡಿಯಾ ಜತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಶೇ 50ರಷ್ಟು ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾ ಎಸ್‌ಎಟಿಎಸ್ ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮಾರಾಟಕ್ಕೂ ಸರ್ಕಾರ ಮುಂದಾಗಿದ್ದು, ಬಿಡ್ ಮಾಡಲು ಆಹ್ವಾನಿಸಿದೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳ ಒಟ್ಟು ಸಾಲ 60,074 ಕೋಟಿ ಇದೆ. ಬಿಡ್ ಮಾಡಿ ಖರೀದಿಸುವವರು 23,286 ಕೋಟಿ ಸಾಲ ಹೊರ ಬೇಕಾಗುತ್ತದೆ. ಉಳಿದ 27,000 ಕೋಟಿ ಸಾಲವನ್ನು ಸರ್ಕಾರ ಭರಿಸಲಿದೆ.
‘ಅರ್ನ್ಸ್ಟ್ ಆ್ಯಂಡ್ ಯಂಗ್’ ಬಿಡ್ ಪ್ರಕ್ರಿಯೆಯ ವಹಿವಾಟು ನಿರ್ವಹಿಸುತ್ತಿದ್ದು, ಮಾರ್ಚ್ 17 ಬಿಡ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಿಡ್‌ನ ಅಂತಿಮ ಫಲಿತಾಂಶ ಮಾರ್ಚ್ 31ರೊಳಗೆ ಹೊರಬೀಳಲಿದೆ.
ಬಿಡ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿದೇಶಿ ಸಂಸ್ಥೆಗಳು ಏರ್ ಇಂಡಿಯಾದ ಗರಿಷ್ಠ ಶೇ 49ರಷ್ಟು ಪಾಲುದಾರಿಕೆ ಪಡೆಯಲು ಅವಕಾಶವಿದೆ. ಸಂಸ್ಥೆಯ ಮಾಲೀಕತ್ವ ಮತ್ತು ನಿಯಂತ್ರಣ ಕುರಿತಾದ ನಿಯಮಗಳೂ ಅನ್ವಯವಾಗಲಿದ್ದು, ಭಾರತೀಯನೇ ಏರ್ ಇಂಡಿಯಾದ ಮಾಲೀಕತ್ವ ಹೊಂದಿರುತ್ತಾನೆ.
2018ರಲ್ಲಿ ಏರ್ ಇಂಡಿಯಾ ಶೇ 76ರಷ್ಟು ಪಾಲು ಮಾರಾಟ ಮಾಡಲು ಪ್ರಯತ್ನಿಸಿತ್ತು. ಆದರೆ, ಬಿಡ್ ಮಾಡಲು ಸಾಕಷ್ಟು ಅಡಚಣೆ ಎದುರಾಗಿತ್ತು. ಸಾಲದ ಮೊತ್ತ 50,000 ಕೋಟಿ ಬಾಕಿ ಇತ್ತು.
ದೇಶದ ಹಿಂದುಜಾ ಗ್ರೂಪ್ ಮತ್ತು ಇಂಟರ್‌ಅಪ್ಸ್ (ಅಮೆರಿಕನ್ ಸಂಸ್ಥೆ) ಬಿಡ್ ಸಲ್ಲಿಕೆಗೆ ಸಿದ್ಧತೆ ನಡೆಸಿರುವುದಾಗಿ ಇತ್ತೀಚೆಗೆ ಸುದ್ದಿಯಾಗಿದೆ.
ಖರೀದಿಗೆ ಯಾರೂ ಮುಂದಾಗದಿದ್ದಲ್ಲಿ ಸಂಸ್ಥೆಯನ್ನು ಮುಚ್ಚಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ