ದಮಾಮ್: ಪೌರತ್ವ ತಿದ್ದುಪಡಿ ಸಂಬಂಧಿಸಿದ ಪ್ರತಿಭಟನೆ ಹಾಗೂ ಕೊಲ್ಲಿ ರಾಷ್ಟ್ರಗಳ ಸ್ವದೇಶೀಕರಣ ಸಮಸ್ಯೆಗಳಿಂದಾಗಿ, ಭಾರತಕ್ಕೆ ಹಣ ರವಾನೆ ಕಡಿಮೆಯಾಗಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಕೋಟಿಗಳ ಕಡಿತ ಕಂಡುಬಂದಿರುವುದಾಗಿ ವರದಿಯಾಗಿದೆ.
2019 ರಲ್ಲಿ ವಿದೇಶದಿಂದ ಹಣ ಕಳುಹಿಸುವಾಗ ರೂಪಾಯಿ ಮೌಲ್ಯ ಕುಸಿತವು ವಲಸಿಗರಿಗೆ ವರದಾನವಾಗಿತ್ತು. ಕೊಲ್ಲಿ ಸಂಘರ್ಷಗಳ ಹಿನ್ನೆಲೆಯಲ್ಲಿ, ತೈಲ ಬೆಲೆಗಳ ಏರಿಕೆ ಮತ್ತು ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತವು ವಲಸಿಗ ಭಾರತೀಯರಿಗೆ ಪ್ರಯೋಜನವನ್ನು ನೀಡಿದೆ. 2019 ರ ಕೊನೆಯಲ್ಲಿ ಭಾರತದ ಪೌರತ್ವ ತಿದ್ದುಪಡಿ ಕಾನೂನ ಬಗ್ಗೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಕಾರಣ ಕೋಟಿ ರೂ.ಗಳ ವಹಿವಾಟು ರವಾನೆ ಕಡಿಮೆ ಕಂಡು ಬಂದಿದೆ.
ಭಾರತೀಯ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ವಿದೇಶಿ ಭಾರತೀಯರ ನಿಸ್ಸಹಕಾರ ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ದೊಡ್ಡ ಸವಾಲನ್ನು ಉಂಟುಮಾಡಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಸೌದಿ ಅರೇಬಿಯಾದ ಹಣಕಾಸು ಪ್ರಾಧಿಕಾರದ ಪ್ರಕಾರ, ಜನವರಿ 1 ಮತ್ತು 2019 ರ ಅಕ್ಟೋಬರ್ 31 ರ ನಡುವೆ ಹಣ ಕಳುಹಿಸಿದ ವಲಸಿಗರ ಸಂಖ್ಯೆ 9.7% ರಷ್ಟು ಕಡಿಮೆಯಾಗಿದೆ. ಅಕ್ಟೋಬರ್ನಲ್ಲಿ ಮಾತ್ರ ಹಣ ರವಾನೆ ಶೇಕಡಾ 5.8 ರಷ್ಟು ಕಡಿಮೆಯಾಗಿದೆ.
ವಿಶ್ವಬ್ಯಾಂಕ್ ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಸೇರಿದಂತೆ ದೇಶಗಳಿಗೆ ರವಾನೆ ಗಮನಾರ್ಹವಾಗಿ ಇಳಿಯುವ ಸಾಧ್ಯತೆಯಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಸ್ವದೇಶೀಕರಣ ದಿಂದಾಗಿ ಅನೇಕ ಜನರು ಊರಿಗೆ ಮರಳಿದ್ದಾರೆ ಎಂದು ವಿಶ್ವಬ್ಯಾಂಕ್ನ ವರದಿಗಳು ತೋರಿಸುತ್ತವೆ.
ವಿಶ್ವಬ್ಯಾಂಕ್ ಪ್ರಕಾರ, 2018 ರಲ್ಲಿ ಭಾರತಕ್ಕೆ 7900 ಕೋಟಿ ಡಾಲರ್ ಬ್ಯಾಂಕಿಂಗ್ ವ್ಯವಹಾರ ನಡೆದಿದೆ. ಭಾರತವು ವಿದೇಶಗಳಿಂದ ಅತಿದೊಡ್ಡ ಹಣ ರವಾನಿಸಲ್ಪಡುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.






