janadhvani

Kannada Online News Paper

ಡಿಸೆಂಬರ್ 27 ಶುಕ್ರವಾರದಿಂದ ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಾರಂಭ

ಧಾರ್ಮಿಕ ಲೌಕಿಕ ಸಮನ್ವಯದ ಪ್ರಥಮ ವಿದ್ಯಾ ಸಂಸ್ಥೆ ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜೂಬಿಲಿಯು ಇದೇ ಬರುವ 27,28,29 ಶುಕ್ರವಾರ, ಶನಿವಾರ, ಆದಿತ್ಯವಾರ ದಿನಗಳಲ್ಲಿ ನಡೆಯಲಿದೆ.

ಮೂರು ದಿನಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯನ್ನು *ಕೇರಳ ರಾಜ್ಯಪಾಲರಾದ ಆರಿಫ್ ಮುಹಮ್ಮದ್ ಖಾನ್* ನಿರ್ವಹಿಸುವರು. ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಲಿದ್ದು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುವಾ ನೇರವೇರಿಸುವರು.

ಅಂದು ರಾತ್ರಿ 7 ಗಂಟೆಗೆ ನಡೆಯುವ ಸೌಹಾರ್ದ ಸಂಗಮವನ್ನು ಕೇರಳ ಸರಕಾರದ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಉದ್ಘಾಟಿಸಲಿದ್ದು ಮಂಗಳೂರು ಶಾಸಕರಾದ ಯುಟಿ ಕಾದರ್,ಬೆಂಗಳೂರು ಶಾಸಕರು ಎನ್ ಎ ಹಾರಿಸ್, ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು, ಭಾಷಣ ಮಾಡುವರು.

ರಾತ್ರಿ 8.30ಕ್ಕೆ ನಡೆಯುವ ಜಲಾಲಿಯ್ಯ ಆಧ್ಯಾತ್ಮಿಕ ಮಜ್ಲಿಸ್ ನಲ್ಲಿ ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ನೇತೃತ್ವ ನೀಡಲಿದ್ದು ಕೇರಳ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಮ್ ಖಲೀಲುಲ್ ಬುಖಾರಿ ಕಡಲುಂಡಿ ಮತ್ತು ಶೈಖ್ ರಾಶಿದ್ ಇಬ್ರಾಹಿಮ್ ಅಲ್ ಮುರೈಖಿ ಬಹರೈನ್, ಶೈಖ್ ಹಬೀಬ್ ಲುಆಯಿ ಮುಹಮ್ಮದ್ ಬಾಫಕೀಹ್ ತುರ್ಕಿ ಉದ್ಬೋದನೆ ನೀಡುವರು.

ಶನಿವಾರದಂದು ಮದ್ಯಾಹ್ನ
ನೂತನ ಶಾಲಾ ಕಟ್ಟಡ ಉದ್ಘಾಟನೆಯನ್ನು ಮಹಾರಾಷ್ಟ್ರದ ಶಾಸಕರಾದ
ಅಮೀನ್ ಪಾಟೀಲ್ ಉದ್ಘಾಟಿಸುವರು. ನಂತರ ತಅಮೀರ್ ಮಿಲ್ಲತ್ ಕಾನ್ಫರೆನ್ಸ್, ಅಕಾಡೆಮಿಕ್ ಸೆಮಿನಾರ್, ನಾಷನಲ್ ಹಾರ್ಮಣಿ ಫೀಯೇಸ್ಟ, ಉರ್ದು ದಅವಾ ಕಾನ್ಫರೆನ್ಸ್, ಹಾಫಿಳ್ ಸಂಗಮ, ಸಾಂಸ್ಕೃತಿಕ ಸಮಾವೇಶ ಹಾಗೂ ಆದರ್ಶ ಸಮ್ಮೇಳನ ನಡೆಯಲಿದೆ.

ಕೊನೆಯ ದಿನದಂದು ಸ್ಥಾನವಸ್ತ್ರ ವಿತರಣೆ, ಸಅದೀ ಸಂಗಮ, ಉಲಮಾ ಕಾನ್ಫರೆನ್ಸ್,
ಹಾಗೂ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು *ದುಬೈ ಅವ್ ಖಾಫ್ ನಿರ್ದೇಶಕರಾದ ಡಾ.ಉಮರ್ ಮುಹಮ್ಮದ್ ಖತೀಬ್ ಉದ್ಘಾಟನೆ ಮಾಡಲಿದ್ದು ಸಯ್ಯಿದ್ ಅಲಿ ಬಾಫಕಿ ತಂಙಳ್ ಕೊಯಿಲಾಂಡಿ ದುವಾ ನಡೆಸುವರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಇ ಸುಲೈಮಾನ್ ಮುಸ್ಲಿಯಾರ್* ಸನದುದಾನ ಮಾಡಲಿದ್ದು ತಾಜುಲ್ ಫುಖಹಾ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಸನದುದಾನ ಭಾಷಣ ಮಾಡಲಿದ್ದಾರೆ. *ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ.

ತಾಜುಶ್ಶರೀಅ ಆಲಿಕುಂಞಿ ಉಸ್ತಾದ್ ಶಿರಿಯ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಂತಾದವರು ಭಾಷಣ ಮಾಡಲಿದ್ದಾರೆ.

1971 ರಿಂದ ಸಣ್ಣ ಪ್ರಮಾಣದಲ್ಲಿ ತನ್ನ ಮನೆ ಮತ್ತು ಜಾಗವನ್ನು ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರು ಸಂಸ್ಥೆಗೆ ದಾನವಾಗಿ ನೀಡಿದ್ದು ನಂತರ ದೊಡ್ಡ ಇಸ್ಲಾಮಿಕ್ ವಿಶ್ವ ವಿದ್ಯಾಲಯವಾಗಿ ಬೆಳೆದಿದೆ.
ಇಸ್ಲಾಮಿಕ್ ಶರೀಅತ್ ಕಾಲೇಜು, ದಅವಾ ಕಾಲೇಜು, ಆರ್ಟ್ಸ್ ಮತ್ತು ಸಯನ್ಸ್ ಕಾಲೇಜು,ಸಅದಿಯ್ಯ ಹೆಣ್ಣುಮಕ್ಕಳು & ಗಂಡು ಮಕ್ಕಳ ಅನಾಥಾಲಯ, ಬೋರ್ಡಿಂಗ್ ಸ್ಕೂಲ್ ಮತ್ತು ಮದ್ರಸ, ವುಮೆನ್ಸ್ ಕಾಲೇಜು ಸಿಬಿಎಸ್ಇ ಸಿಲೆಬಸ್ ಹೈಯರ್ ಸೆಕೆಂಡರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕನ್ನಡ ಮೀಡಿಯಂ ಸ್ಕೂಲ್, ಮಲಯಾಳಂ ಮೀಡಿಯಂ ಸ್ಕೂಲ್, ಐಟಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಿಫ್ಳುಲ್ ಕುರ್ ಆನ್ ಕಾಲೇಜು, ನೋರ್ತ್ ಇಂಡಿಯನ್ಸ್ ಕಾಲೇಜು ಸೇರಿದಂತೆ ಮೂವತ್ತ ಐದು ಸಂಸ್ಥೆಗಳು ಸುಮಾರು 65 ಏಕರೆ ವಿಶಾಲ ಕ್ಯಾಂಪಸ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಉಲ್ಲೇಖ:

ಮಂಗಳೂರಿನ ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು( ಶಿಫಾನ 12 ಮತ್ತು ಶಫೀಕ್ 8 )ಜಾಮಿಅ ಸಅದಿಯ್ಯ ಅರಬಿಯ್ಯ ಎಲ್ಲಾ ರೀತಿಯ ಶಿಕ್ಷಣ ನೀಡಲು ದತ್ತು ಸ್ವೀಕಾರ ಮಾಡಲಾಗಿದೆ*

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದವರು:
ಹಾಫಿಳ್ ಯಾಕೂಬ್ ಸಅದಿ ನಾವೂರು
(ಪ್ರಧಾನ ಕಾರ್ಯದರ್ಶಿಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರ ಸಮಿತಿ ಕರ್ನಾಟಕ)

ಭಾಗವಹಿಸಿದವರು
ಹಾಜಿ ಅಬ್ದುಲ್ ರಝಾಕ್ ಮಲಾರ್
( ಚೇರ್ಮಾನ್ ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರ ಸಮಿತಿ ಕರ್ನಾಟಕ)

ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು
( ರಾಜ್ಯಾಧ್ಯಕ್ಷರು
ಮಜ್ಲಿಸುಲ್ ಉಲಮಾಯಿ ಸ್ಸಅದಿಯ್ಯೀನ್ ಕರ್ನಾಟಕ)

ಇಸ್ಮಾಯಿಲ್ ಸಅದಿ ಉರುಮಣೆ ( ಕಾರ್ಯಾಧ್ಯಕ್ಷರು ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರ ಸಮಿತಿ ಕರ್ನಾಟಕ)

ಮೊಯಿದೀನ್ ಅಲ್ ಸಫರ್ ಮುಕ್ಕ
(ಕೋಶಾಧಿಕಾರಿ ಸಅದಿಯ್ಯ ಗೋಲ್ಡನ್ ಜೂಬಿಲಿ ಪ್ರಚಾರ ಸಮಿತಿ).